LATEST NEWS
ವಿಮಾನದೊಳಗೆ ಸಿಗರೇಟು ಸೇದಿದ ಬಾಬಿ ಕಟಾರಿಯಾ: ವಿಡಿಯೋ ಈಗ ವೈರಲ್
ಗುರ್‌ಗಾಂವ್, ಆಸಗ್ಟ್ 11: ಮೊಬೈಲನ್ನೇ ಬಳಸಲು ಬಿಡದ ವಿಮಾನದೊಳಗೆ ವ್ಯಕ್ತಿಯೊಬ್ಬ ಸಿಗರೇಟ್ ಸೇದಿದ್ದಾನೆ. ಸ್ಪೈಸ್‌ಜೆಟ್ ವಿಮಾನದಲ್ಲಿ ಸೀಟಿನ ಮೇಲೆ ಕಾಲಿನ ಮೇಲೆ ಕಾಲು ಹಾಕಿ ಮಲಗಿ ಸಿಗರೇಟ್ ಹೊತ್ತಿಸಿದ ವಿಡಿಯೋ ಈಗ ವೈರಲ್ ಆಗಿದೆ.
ಈ ವಿಡಿಯೋದಲ್ಲಿ 6.30 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಇನ್‌ಸ್ಟಾಗ್ರಾಮ್ ಪ್ರಭಾವಿ ಮತ್ತು ಗುರ್‌ಗಾಂವ್ ನಿವಾಸಿ ಬಾಬಿ ಕಟಾರಿಯಾ ಎಂಬಾತ ವಿಮಾನದ ಸೀಟಿನ ಮೇಲೆ ಮಲಗಿ ಸಿಗರೇಟ್ ಸೇದುತ್ತಿರುವುದು ಕಂಡು ಬಂದಿದೆ. ಪ್ರಯಾಣಿಕರಿಗೆ ವಿಮಾನದ ಕ್ಯಾಬಿನ್‌ನೊಳಗೆ ಧೂಮಪಾನವು ಬೆಂಕಿಯ ಗಂಭೀರ ಅಪಾಯವನ್ನುಂಟುಮಾಡುತ್ತದೆ. ಆದ್ದರಿಂದ ಭಾರತದಲ್ಲಿ ಪ್ರಯಾಣಿಕ ವಿಮಾನದೊಳಗೆ ಧೂಮಪಾನವನ್ನು ನಿಷೇಧಿಸಲಾಗಿದೆ.
ಟ್ವಿಟ್ಟರ್‌ನಲ್ಲಿ ಜನರು ಈ ವಿಡಿಯೋವನ್ನು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಟ್ಯಾಗ್ ಮಾಡಿದ್ದಾರೆ. ಅದಕ್ಕೆ ಅದನ್ನು ತನಿಖೆ ಮಾಡಲಾಗುತ್ತಿದೆ. ಅಂತಹ ಅಪಾಯಕಾರಿ ನಡವಳಿಕೆಯ ಬಗ್ಗೆ ಯಾವುದೇ ದಯದಾಕ್ಷಿಣ್ಯ ತೋರುವುದಿಲ್ಲ ಎಂದು ಸಚಿವ ಸಿಂಧ್ಯಾ ಟ್ವೀಟ್ ಮಾಡಿದ್ದಾರೆ.
2022ರ ಜನವರಿ 20ದು ದುಬೈನಿಂದ ದೆಹಲಿಗೆ ಪ್ರಯಾಣಿಸಲು ಉದ್ದೇಶಿಸಲಾದ SG 706 ಸ್ಟೈಸ್ ಜೆಟ್ ವಿಮಾನವನ್ನು ಪ್ರಯಾಣಿಕರು ಹತ್ತುತ್ತಿರುವಾಗ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. 21ನೇ ಸಾಲಿನಲ್ಲಿ ಕ್ಯಾಬಿನ್ ಸಿಬ್ಬಂದಿ ಆನ್-ಬೋರ್ಡಿಂಗ್ ಕಾರ್ಯವಿಧಾನವನ್ನು ಪೂರ್ಣಗೊಳಿಸಲು ನಿರತರಾಗಿದ್ದಾಗ ಈ ಕಟಾರಿಯಾ ಎಂಬುವವ ಮತ್ತು ಅವರ ಸಹ ಪ್ರಯಾಣಿಕರು ವಿಡಿಯೋವನ್ನು ಚಿತ್ರೀಕರಿಸಿದರು. ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಈ ಕೃತ್ಯದ ಬಗ್ಗೆ ತಿಳಿದಿರಲಿಲ್ಲ. ವಿಷಯವು ಏರ್‌ಲೈನ್‌ನ ಗಮನಕ್ಕೆ ಬಂದಿತು ಎಂದು ವಕ್ತಾರರು ತಿಳಿಸಿದ್ದಾರೆ.
ಈ ಬಗೆಯ ಸದರಿ ಪ್ರಯಾಣಿಕನ ಬಗ್ಗೆ ನಾಗರಿಕ ವಿಮಾನಯಾನ ಅಗತ್ಯತೆಗಳ ನಿಬಂಧನೆಗಳ ಪ್ರಕಾರ ರಚಿಸಲಾದ ಆಂತರಿಕ ಸಮಿತಿಗೆ ವಿಷಯವನ್ನು ಉಲ್ಲೇಖಿಸಲಾಗಿದೆ. ಈ ಪ್ರಯಾಣಿಕರನ್ನು ವಿಮಾನಯಾನ ಸಂಸ್ಥೆಯು 15 ದಿನಗಳವರೆಗೆ ಹಾರಾಟ ನಿಷೇಧದ ಪಟ್ಟಿಗೆ ಸೇರಿಸಿದೆ ಎಂದು ವಕ್ತಾರರು ಹೇಳಿದ್ದಾರೆ.