KARNATAKA
ಬೆಂಗಳೂರಿನ ಅಂಗಡಿಯೊಂದರಲ್ಲಿ ಸ್ಪೋಟ – ಮೂವರ ಸಾವು

ಬೆಂಗಳೂರು: ಅಂಗಡಿಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಪಟಾಕಿ ಸ್ಪೋಟಗೊಂಡು ಮೂವರು ಸಾವನಪ್ಪಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯ ರಾಯನ್ ಸರ್ಕಲ್ ಬಳಿಯ ನ್ಯೂ ತಗರುಪೇಟೆಯಲ್ಲಿ ಇಂದು ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ
ಲಾರಿ ದುರಸ್ತಿ ಅಂಗಡಿಯಲ್ಲಿ ಪಟಾಕಿ ಶೇಖರಿಸಲಾಗಿತ್ತು. ಮಧ್ಯಾಹ್ನ ಪಟಾಕಿಗಳಿಗೆ ಬೆಂಕಿ ಹೊತ್ತಿಕೊಂಡು ಸಿಡಿದಿವೆ. ದುರಸ್ತಿ ಕೊಠಡಿಯಲ್ಲಿದ್ದ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅವಘಡದಿಂದ ವ್ಯಕ್ತಿಯೊಬ್ಬರ ಕಾಲು ತುಂಡಾಗಿ ಬಿದ್ದಿದ್ದು, ಆ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಸ್ತೆಯಲ್ಲೆಲ್ಲ ರಕ್ತದ ಕಲೆಗಳು ಇವೆ. ಪಟಾಕಿಗಳ ಅವಶೇಷವೂ ಇದೆ. ‘ಮಳಿಗೆಯಲ್ಲಿ ಅಕ್ರಮವಾಗಿ ಪಟಾಕಿ ಸಂಗ್ರಹಿಸಲಾಗಿತ್ತು. ಪಟಾಕಿಗೆ ಬೆಂಕಿ ಹೊತ್ತಿ, ಅನಾಹುತ ಸಂಭವಿಸಿದೆ. ಪಟಾಕಿ ಸದ್ದು ಕೇಳಿಸಿ, ಸ್ಥಳೀಯರು ಸಹ ಗಾಬರಿಯಿಂದ ಮನೆಯಿಂಗ ಹೊರಗೆ ಓಡಿ ಬಂದಿದ್ದಾರೆ’ ಎಂದೂ ಸ್ಥಳೀಯರೊಬ್ಬರು ಹೇಳಿದರು.