KARNATAKA
ಜ್ಯೋತಿಷಿ ಆನಂದ್ ಗುರೂಜಿಗೆ ಬ್ಲ್ಯಾಕ್‌ಮೇಲ್!
ಬೆಂಗಳೂರು, ಫೆಬ್ರವರಿ : ಜ್ಯೋತಿಷಿ ಆನಂದ್ ಗುರೂಜಿ ಅವರಿಗೆ ಸಂಬಂಧಿಸಿದ ವಿಡಿಯೋ ಇಟ್ಟುಕೊಂಡು 50 ಲಕ್ಷ ಹಣಕ್ಕಾಗಿ ಮೂವರು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಬಿ.ಆರ್.ನಾಗರಾಜ್ ಕೊಟ್ಟ ದೂರಿನ ಮೇರೆಗೆ ಕೃಷ್ಣಮೂರ್ತಿ, ವೆಂಕಟೇಶ್ ಮತ್ತು ಜಿ.ಕೆ. ವೇಲು ಅಲಿಯಾಸ್ ಮಾರ್ಕೆಟ್ ವೇಲು ಎಂಬುವವರ ವಿರುದ್ಧ ಕೇಸ್ ದಾಖಲಾಗಿದೆ.
ಆನಂದ್ ಗುರೂಜಿ ಮತ್ತು ಎಸ್.ಇ. ಸುದೀಂದ್ರ ಅವರ ಕುರಿತಾಗಿ ಕೆಟ್ಟದ್ದಾಗಿ ಚಿತ್ರಿಸಿದ ವಿಡಿಯೋ ತುಣಕನ್ನು ವೈರಲ್ ಮಾಡುವುದಾಗಿ ಬೆದರಿಸಿದ ದುಷ್ಕಮಿಗಳು ಹಣಕ್ಕಾಗಿ ಸುಧೀಂದ್ರನನ್ನು ಪೀಡಿಸಿದ್ದಾರೆ. ಈ ಬಗ್ಗೆ ಸುದೀಂದ್ರರ ಆಪ್ತ ನಾಗರಾಜ್ ದೂರು ನೀಡಿದ್ದಾರೆ.
ಹಾಯ್ ಸೂರ್ಯ ಪತ್ರಿಕೆ ಪ್ರದಾನ ಸಂಪಾದನ ಜಿ.ಕೆ. ವೇಲು ಅಲಿಯಾಸ್ ಮಾರ್ಕೆಟ್ ವೇಲು ಮತ್ತು ಯುವ ಕರ್ನಾಟಕ ಸಂಘದ ಅಧ್ಯಕ್ಷ ಎ.ಸಿ.ವೆಂಕಟೇಶ್ ಎಂಬುವವರು ಸುಧೀಂದ್ರ ಹಾಗೂ ಆನಂದ್ಗುರೂಜಿ ಕುಟುಂಬದ ವೈಯಕ್ತಿಕ ವಿಷಯಗಳ ಕುರಿತಾಗಿ ಕೆಲವೊಂದು ಮಾಹಿತಿಗಳನ್ನು ಸಿದ್ಧಪಡಿಸಿದ್ದು, ಅದರ ಕುರಿತು ನಮ್ಮ ಪತ್ರಿಕೆಯಲ್ಲಿ ಪ್ರಕಟಿಸುವುದಾಗಿ ಹಾಗೂ ಎಲ್ಲ ಟಿವಿ ಚಾನೆಲ್ಗಳಿಗೂ ಕೊಡುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ ಈ ಬಗ್ಗೆ ಸುದ್ದಿ ಮಾಡದಿರಲು 50 ಲಕ್ಷ ರೂ. ಕೊಡುವಂತೆ ಸುಧೀಂದ್ರಗೆ ಬೆದರಿಕೆ ಹಾದ್ದರು.ಈ ಬೆದರಿಕೆಯನ್ನ ಸುಧೀಂದ್ರ ನಿರ್ಲಕ್ಷಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಅವರು ಗುರೂಜಿ ಮತ್ತು ಸುಧೀಂದ್ರರ ಬಗ್ಗೆ ಇನ್ನಷ್ಟು ಕೆಟ್ಟದ್ದಾಗಿ ಚಿತ್ರಿಸಿ ಅದರ ವಿಡಿಯೋ ತುಣಕನ್ನು ಕೃಷ್ಣಮೂರ್ತಿ ಎಂಬಾತನ ಮೊಬೈಲ್ ನಂಬರ್ನಿಂದ ಸುಧೀಂದ್ರನ ಆಪ್ತ ನಾಗರಾಜ್ ಮೊಬೈಲ್ಗೆ ಕಳುಸಿದ್ದರು. ಅಲ್ಲದೆ ಈ ಬಗ್ಗೆ ಸುದ್ದಿ ಪ್ರಕಟಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದರು.
2021ರ ಜ.12ರಿಂದ 21ರವರೆಗೆ ಸತತವಾಗಿ ಕರೆ ಮಾಡಿದ ದುಷ್ಕರ್ಮಿಗಳು, ಇದು ಕೊನೆಯ ಅವಕಾಶ. ಸುದ್ದಿ ಪ್ರಕಟ ಆಗಬಾರದು ಎಂದರೆ ಹಣ ಕೊಡಿಸಿ ಎಂದು ದುಂಬಾಲು ಬಿದ್ದಿದ್ದರು. ಕೊನೇ ಪಕ್ಷ 26 ಲಕ್ಷ ಹಣವಾದರೂ ಕೊಡಿಸಬೇಕು. ಇಲ್ಲವಾದಲ್ಲಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಜೀವ ಸಹಿತ ಉಳಿಸಲ್ಲ ಎಂದು ಪ್ರಾಣ ಬೆದರಿಕೆ ಹಾಕಿದ್ದರು.
ಆ ಮೂವರು ಆರೋಪಿಗಳು ನಮಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ. ಸುಳ್ಳು ಸುದ್ದಿ ಪ್ರಕಟಿಸಿ, ಮಾನ ಕಳೆಯುವುದಾಗಿ ಹಿಂಸಿಸಿದ್ದಾರೆ ಎಂದು ನಾಗರಾಜ್ ದೂರಿನಲ್ಲಿ ವಿವರಿಸಿದ್ದಾರೆ. ಈ ದೂರಿನ ಮೇರೆಗೆ ಆರೋಪಿಗಳಾದ ಕೃಷ್ಣಮೂರ್ತಿ, ವೆಂಕಟೇಶ್ ಎಂಬುವರನ್ನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಮಾರ್ಕೆಟ್ ವೇಲುಗಾಗಿ ಬಲೆ ಬೀಸಲಾಗಿದೆ.