Connect with us

LATEST NEWS

ಕಸಾಯಿ ಖಾನೆ ಅನುದಾನದ ವಿರುದ್ದ ಹೋರಾಟಕ್ಕೆ ಮುಂದಾದ ಬಿಜೆಪಿ

ಕಸಾಯಿ ಖಾನೆ ಅನುದಾನದ ವಿರುದ್ದ ಹೋರಾಟಕ್ಕೆ ಮುಂದಾದ ಬಿಜೆಪಿ

ಉಡುಪಿ ಅಕ್ಟೋಬರ್ 7: ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಸ್ಮಾರ್ಟ್ ಸಿಟಿಯ ಅನುದಾನವನ್ನು ಕಸಾಯಿಖಾನೆಗೆ ನೀಡಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಖಾದರ್ ಈ ಬಗ್ಗೆ ಸ್ಪಷ್ಟನೆ ನೀಡದಿದ್ದಲ್ಲಿ ಮೂರು ಜಿಲ್ಲೆಗಳಲ್ಲಿ ದೊಡ್ಡ ಹೋರಾಟ ನಡೆಸಲಾಗುವುದು ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಎಚ್ಚರಿಸಿದ್ದಾರೆ.

ಕಾರ್ಕಳದಲ್ಲಿ ಮಾತನಾಡಿದ ಅವರು ವಿಧಾನಸಭೆ ವಿಪಕ್ಷ ಮುಖ್ಯ ಸಚೇತಕ ಸುನಿಲ್ ಕುಮಾರ್ ಸ್ಮಾರ್ಟ್ ಸಿಟಿ ಯೋಜನೆಗೆ ನೀಡಿರುವ ಅನುದಾನವನ್ನು ಅಭಿವೃದ್ಧಿಗೆ ಕಾರ್ಯಗಳಿಗೆ ಬಳಸಬೇಕಾಗಿತ್ತು ಆದರೆ ಸಚಿವ ಖಾದರ್ ಕಸಾಯಿಖಾನೆ ಹಣ ಬಳಸಿರುವ ಹಿಂದೆ ದೊಡ್ಡ ಹುನ್ನಾರ ಇದೆ ಇದಕ್ಕೆಸಚಿವ ಯು.ಟಿ ಖಾದರ್ ಇದಕ್ಕೆ ಸ್ಪಷ್ಟನೆ ಕೊಡಬೇಕು ಎಂದು ಹೇಳಿದರು. ಯಾವುದೇ ಕಾರಣಕ್ಕೂ 15 ಕೋಟಿ ಅನುದಾನವನ್ನು ಕಸಾಯಿಖಾನೆಗೆ ಬಳಕೆ ಮಾಡಲು ಬಿಡಲ್ಲ, ಇದು ಮಹಾನಗರ ಪಾಲಿಕೆಗೆ ಸಂಬಂಧಪಟ್ಟ ವಿಷಯವಲ್ಲ, ಇದರ ವಿರುದ್ದ ಮೂರು ಜಿಲ್ಲೆಗಳಲ್ಲಿ ದೊಡ್ಡ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಸಚಿವ ಖಾದರ್ ಹಿಂದೂ ವಿರೋಧಿ ನೀತಿಯನ್ನು ತಕ್ಷಣ ಕೈಬಿಡಬೇಕು, ಅಲ್ಲದೆ ಖಾದರ್ ಮತ್ತು ಬೆಂಬಲಿಗರು ಅಪರಾಧಿ ಚಟುವಟಿಕೆಗೆ ಬೆಂಬಲಿಸ್ತಿದ್ದಾರೆ. ಸರ್ಕಾರಿ ಹಣ ಅಭಿವೃದ್ಧಿಗೆ ಉಪಯೋಗವಾಗಲಿ ಎಂದರು.

ಸಚಿವ ಯು.ಟಿ ಖಾದರ್ ಗೆ ಕಸಾಯಿಖಾನೆಗ ಬಗ್ಗೆ ಆಸಕ್ತಿ ಜಾಸ್ತಿ ಇದ್ದು, ಸ್ಮಾರ್ಟ್ ಸಿಟಿ ಬಗ್ಗೆ ಅವರಿಗೆ ಆಸಕ್ತಿಯಿಲ್ಲ ಎಂದರು. ರಾಜ್ಯದ ಜನ ಸುಂದರ ನಗರವನ್ನು ಬಯಸುತ್ತಾರೆ. ರಾಜ್ಯ ಸರಕಾರಕ್ಕೆ ಕಸಾಯಿಖಾನೆ ಮುಚ್ಚುವ ತಾಕತ್ತಿಲ್ಲ. ಅಕ್ರಮ ಗೋವು ಸಾಗಾಟ ತಡೆಯುವ ತಾಕತ್ತು ರಾಜ್ಯ ಸರ್ಕಾರಕ್ಕಿಲ್ಲ ಎಂದು ಕಾರ್ಕಳದಲ್ಲಿ ಶಾಸಕ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *