LATEST NEWS
ಸತ್ತ ಅಮಾಯಕರ ಕುಟುಂಬದ ಕಣ್ಣೀರಿನ ಮೇಲೆ ರಾಜಕಾರಣ ಮಾಡುವ ಬಿಜೆಪಿ : ಮುನೀರ್ ಕಾಟಿಪಳ್ಳ
ಸತ್ತ ಅಮಾಯಕರ ಕುಟುಂಬದ ಕಣ್ಣೀರಿನ ಮೇಲೆ ರಾಜಕಾರಣ ಮಾಡುವ ಬಿಜೆಪಿ : ಮುನೀರ್ ಕಾಟಿಪಳ್ಳ
ಮಂಗಳೂರು, ಜನವರಿ 05 : ಮಂಗಳೂರಿನ ಸುರತ್ಕಲ್ ನ ಕಾಟಿಪಳ್ಳದಲ್ಲಿ ನಡೆದ ದೀಪಕ್ ಕೊಲೆಯ ವಿರುದ್ದ ಬಂದ್, ರಸ್ತೆ ತಡೆ ಅಂತ ಬೀದಿಗಿಳಿದಿರುವ ಬಿಜೆಪಿ ಮುಖಂಡರು ಸಾವು ಬದುಕಿನ ಮದ್ಯೆ ಒದ್ದಾಡುತ್ತಿರುವ ಬಶೀರ್ ಬಗ್ಗೆ ಯಾಕೆ ಮಾತಾಡುವುದಿಲ್ಲ ಎಂದು ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು ದೀಪಕ್ ಹತ್ಯೆಗೆ ಪ್ರತೀಕಾರ ಎಂದು ರಸ್ತೆಯಲ್ಲಿ ಹೋಗುವ ಅಮಾಯಕ ಮುಸಲ್ಮಾನನ್ನು ಕಡಿದು ಕೊಲೆ ಮಾಡುವುದು ಬಿಜೆಪಿಗೆ ಸಮ್ಮತವೇ ?
ಸಿ ಟಿ ರವಿ, ಶೋಭಾ, ನಳಿನ್ ಜನಪ್ರತಿನಿಧಿಗಳಲ್ಲವೆ ?
ಮುಸ್ಲಿಮರ ಕೊಲೆ, ಸಾವು ಇವರಿಗೆ ತಟ್ಟುವುದಿಲ್ಲ ಅಂತಾದರೆ ಬಿಜೆಪಿಯಲ್ಲಿ ಅಲ್ಪ ಸಂಖ್ಯಾತರ ಘಟಕ ಯಾಕಿದೆ ? ಎಂದು ಪ್ರಶ್ನಿಸಿದ್ದಾರೆ.
ಕಾಟಿಪಳ್ಳದ ದೀಪು ನನ್ನ ತಮ್ಮ, ಬಶೀರ್ ನನ್ನ ಅಣ್ಣ.
ಇಬ್ಬರ ಮನೆಯಲ್ಲೂ ಕಣ್ಣೀರು ಸುರಿಸುತ್ತಿರುವ ಹೆಣ್ಣು ಮಕ್ಕಳು ನನ್ನ ಅಮ್ಮಂದಿರು. ಅವರೆಲ್ಲರ ಜೊತೆ ನಾವು ನಿಲ್ಲುತ್ತೇವೆ.
ಶವ ರಾಜಕಾರಣ, ಸತ್ತ ಅಮಾಯಕರ ಕುಟುಂಬದ ಕಣ್ಣೀರಿನ ಮೇಲೆ ರಾಜಕಾರಣ ಮಾಡುವ ಬಿಜೆಪಿಯ ಮುಖಂಡರಿಗೆ ಇದು ಸಾಧ್ಯವೆ ? ಎಂದು ಪ್ರಶ್ನಿಸಿದ ಮುನೀರ್ ಕಾಟಿಪಳ್ಳ ಅವರು ಜನ ಖಂಡಿತಾ ಇದನ್ನೆಲ್ಲ ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಸೂಕ್ತ ಉತ್ತರ ನೀಡುತ್ತಾರೆ ಎಂದು ಹೇಳಿಕೆಯಲ್ಲಿ ಹೇಳಿದ್ದಾರೆ.