LATEST NEWS
ಪ್ರವಾದಿ ಮೊಹಮ್ಮದ್ ರ ಅವಹೇಳನ – ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಪಕ್ಷದಿಂದ ಉಚ್ಚಾಟನೆ

ನವದೆಹಲಿ ಜೂನ್ 05: ಟಿವಿ ಡಿಬೆಟ್ ಒಂದರಲ್ಲಿ ಪ್ರವಾದಿ ಮೊಹಮ್ಮದ್ ಅವರ ಕುರಿತಂತೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿಯ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಿಜೆಪಿ ಅಮಾನತುಗೊಳಿಸಿದೆ.
ಈ ಬಗ್ಗೆ ಪತ್ರದ ಮೂಲಕ ಸ್ಪಷ್ಟಪಡಿಸಿರುವ ಬಿಜೆಪಿ ಶಿಸ್ತು ಪಾಲನಾ ಕಮಿಟಿಯ ಕಾರ್ಯದರ್ಶಿ ಓಂ ಪಾಠಕ್, ಪಕ್ಷದ ಶಿಸ್ತಿನ ವಿರುದ್ಧವಾಗಿ ನಡೆದುಕೊಂಡ ಕಾರಣ ನೂಪುರ್ ಶರ್ಮಾರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ನಿಮ್ಮ ಪ್ರಾಥಮಿಕ ಸದಸ್ಯತ್ವವನ್ನು ತಕ್ಷಣದಿಂದಲೇ ಕೊನೆಗೊಳಿಸಲಾಗಿದೆ.

ನಿಮ್ಮನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ’ ಎಂದು ಜಿಂದಾಲ್‌ಗೆ ಬಿಜೆಪಿಯ ದೆಹಲಿ ಘಟಕದ ಅಧ್ಯಕ್ಷ ಆದೇಶ್ ಗುಪ್ತಾ ಹೇಳಿದ್ದಾರೆ. ‘ವಿವಿಧ ವಿಷಯಗಳಲ್ಲಿ ಪಕ್ಷದ ನಿಲುವಿಗೆ ವಿರುದ್ಧವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೀರಿ. ಇದು ಪಕ್ಷದ ಸಂವಿಧಾನದ ಉಲ್ಲಂಘನೆಯಾಗಿದೆ’ ಎಂದು ನೂಪುರ್ ಶರ್ಮಾಗೆ ಬಿಜೆಪಿ ಹೇಳಿದೆ. ‘ಹೆಚ್ಚಿನ ವಿಚಾರಣೆ ಬಾಕಿ ಇದೆ. ನಿಮ್ಮನ್ನು ಪಕ್ಷದಿಂದ, ಜವಾಬ್ದಾರಿಗಳಿಂದ ಹಾಗೂ ನಿಮಗೆ ವಹಿಸಲಾಗಿರುವ ಕೆಲಸಗಳಿಂದ ತಕ್ಷಣವೇ ಅಮಾನತುಗೊಳಿಸಲಾಗಿದೆ’ ಎಂದು ಶರ್ಮಾಗೆ ಬಿಜೆಪಿ ತಿಳಿಸಿದೆ.