DAKSHINA KANNADA
ರಾಜೀವ್ ಗಾಂಧಿ ಹತ್ಯೆಯ ಹಿಂದೆ ಬಿಜೆಪಿ ಕೈವಾಡ- ಸಚಿವ ಯು.ಟಿ.ಖಾದರ್

ರಾಜೀವ್ ಗಾಂಧಿ ಹತ್ಯೆಯ ಹಿಂದೆ ಬಿಜೆಪಿ ಕೈವಾಡ- ಸಚಿವ ಯು.ಟಿ.ಖಾದರ್
ಮಂಗಳೂರು ಅಕ್ಟೋಬರ್ 4: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸಾವಿಗೆ ಬಿಜೆಪಿಯೇ ಪರೋಕ್ಷ ಕಾರಣ ಎಂಬ ವಿವಾದಾತ್ಮಕ ಹೇಳಿಕೆಯನ್ನು ಸಚಿವ ಯು ಟಿ ಖಾದರ್ ನೀಡಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಯು .ಟಿ ಖಾದರ್, ಬಿಜೆಪಿ ವಿರುದ್ದ ಹರಿಹಾಯ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಗೆ ಝಡ್ ಪ್ಲಸ್ ಭಧ್ರತೆ ಒದಗಿಸಲಾಗುತ್ತಿದೆ, ಬುಲೆಟ್ ಫ್ರೂಪ್ ಕಾರು ನೀಡಲಾಗುತ್ತಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಯವರಿಗೆ ನೀಡಿದ್ದ ಭಧ್ರತೆ ಬಗ್ಗೆ ಟೀಕಿಸಿ ಬಿಜೆಪಿ ಭಯೋತ್ಪಾದಕರಿಗೆ ಪೂರಕ ವಾತವರಣವನ್ನು ಬಿಜೆಪಿ ಕಲ್ಪಿಸಿತು ಎಂದು ಅವರು ಆರೋಪಿಸಿದರು.

ಆದರೆ ಇದೀಗ ಭಾರೀ ಭಧ್ರತೆಯಲ್ಲಿ ಬಿಜೆಪಿಯವರು ಹೋಗುತ್ತಿದ್ದಾರೆ. ಅಮಿತ್ ಶಾ ಅವರಿಗೆ ಭಧ್ರತೆ ನೀಡಲು ಶಾ ಕೇಂದ್ರ ಸಚಿವರಲ್ಲ, ದೇಶದ ಪ್ರಧಾನಿಯಲ್ಲ ಎಂದು ಖಾದರ್ ಟೀಕಿಸಿದರು. ಅಮಿತ್ ಶಾ ಮಂಗಳೂರಿಗೆ ಬಂದ ಕುರಿತು ನಮಗೆ ತಕರಾರು ಇಲ್ಲ. ಆದರೆ ಮಂಗಳೂರಿಗೆ ಬಂದ ವೇಳೆ ರಾಜ್ಯದ ಜನತೆ ಜೊತೆಗೆ ಮಾತನಾಡಬೇಕಿತ್ತು ಎಂದು ಅವರು ಹೇಳಿದರು.
ದೇಶದ ಜನತೆಗಾಗಿ ಕೇಂದ್ರ ಸರ್ಕಾರ ಏನೂ ಮಾಡಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ರಾಜಕೀಯದಾಟ ಆರಂಭಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಅವರಿಂದ ಕರ್ನಾಟಕವನ್ನ ಗುಜರಾತ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಅವರು ಕರ್ನಾಟಕದ ಜನತೆ ಮಾನವೀಯತೆಗೆ ಒತ್ತು ಕೊಟ್ಟವರು. ಹೀಗಾಗಿ ಬಿಜೆಪಿ ಅವರ ಮಾತಿಗೆ ರಾಜ್ಯದ ಜನ ಮರುಳಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.