LATEST NEWS
ಇದು ಸಮಸ್ತ ಹಿಂದೂ ಸಮಾಜ, ನಮ್ಮ ಅಸ್ಮಿತೆ ಮತ್ತು ಸಂಸ್ಕೃತಿಯ ಮೇಲೆ ನಡೆದ ದಾಳಿ

ಮಂಗಳೂರು ಎಪ್ರಿಲ್ 23: ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿ ಖಂಡಿಸಿ ಬಿಜೆಪಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿತು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳೂರಿನ ಮಿನಿವಿಧಾನಸೌಧದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಸದ ಬಿೃಜೇಶ್ ಚೌಟ ಭಾರತದ ಪ್ರಗತಿಯನ್ನು ಸಹಿಸದ ಜಿಹಾದಿ ಶಕ್ತಿಗಳು ಈ ದಾಳಿಯನ್ನು ನಡೆಸಿದ್ದು, ಇದು ಸಮಸ್ತ ಹಿಂದೂ ಸಮಾಜ, ನಮ್ಮ ಅಸ್ಮಿತೆ ಮತ್ತು ಸಂಸ್ಕೃತಿಯ ಮೇಲೆ ನಡೆದ ದಾಳಿ. ಇಂತಹ ಮಾನಸಿಕತೆಗಳು ದೇಶದ ಎಲ್ಲೇ ಇದ್ದರೂ ಕೊನೆಯ ದಿನಗಳನ್ನು ಎಣಿಸಲು ಸಿದ್ಧರಾಗಿ ಎಂದು ಎಚ್ಚರಿಸಿದರು.

ಶಾಸಕ ಭರತ್ ಶೆಟ್ಟಿ ಮಾತನಾಡಿ ಇದು ಹಿಂದೂಗಳ ಮೇಲಿನ ದಾಳಿಯಾಗಿದ್ದು, ಹೆಸರಿಗೆ ಮಾತ್ರ ನಾವು ಬಹುಸಂಖ್ಯಾತರು ಆದರೆ ನಮ್ಮ ಮೇಲೆ ದಿನದಿಂದ ದಿನಕ್ಕೆ ಹೆಚ್ಚು ಕೆಟ್ಟದಾಗುತ್ತಿದೆ ಎಂದರು. ಜಿಹಾದಿಗಳು ಯಾವುದಕ್ಕೂ ಹೆದರುವುದಿಲ್ಲ, ಅವರು ಬಾಂಬ್ ಹಾಕಲಿಕ್ಕೆ ಮಾತ್ರ ಬರುವುದು, ಜಿಹಾದಿಗಳು ಹಿಂದೂಗಳ ಒಗ್ಗಟ್ಟಿಗೆ ಹೆದರುತ್ತಾರೆ. ಆದರೆ ರಾಜಕೀಯ ಬಳಸಿ ಹಿಂದೂಗಳನ್ನು ಒಗ್ಗಟಾಗಿ ಇಡಲು ಅವರು ಬೀಡುವುದಿಲ್ಲ ಎಂದರು.