LATEST NEWS
ಕೇರಳ ಭಯೋತ್ಪಾದನೆಯ ‘ಹಾಟ್ ಸ್ಪಾಟ್‘: ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ

ತಿರುವನಂತಪುರಂ, ಸೆಪ್ಟೆಂಬರ್ 27: ಕೇರಳ ರಾಜ್ಯ ತೀವ್ರವಾದಿ ಮತ್ತು ಭಯೋತ್ಪಾದನೆ ವಿಷಯಗಳಲ್ಲಿ ‘ಹಾಟ್ ಸ್ಪಾಟ್‘ ಆಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.
ಕೇರಳ ಪ್ರವಾಸದಲ್ಲಿರುವ ಅವರು ಇಲ್ಲಿನ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೇರಳದಲ್ಲಿ ಹಿಂಸೆ, ಕೋಮು ಉದ್ವಿಗ್ನತೆ ಹೆಚ್ಚುತ್ತಿದ್ದು ದೇವರ ನಾಡು ತೀವ್ರವಾದಿ ಅಂಶಗಳಲ್ಲಿ ‘ಹಾಟ್ ಸ್ಪಾಟ್‘ ಆಗಿದೆ. ಇಲ್ಲಿ ನಾಗರಿಕರ ಬದುಕು ಸುರಕ್ಷಿತವಾಗಿಲ್ಲ ಎಂದು ನಡ್ಡಾ ಹೇಳಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕುಟುಂಬ ಕೂಡ ಸರ್ಕಾರದಲ್ಲಿ ತೊಡಗಿಕೊಂಡಿದೆ. ಅವರ ಮಗಳು ಮತ್ತು ಅಳಿಯ ಸರ್ಕಾರದಲ್ಲಿ ಹಸ್ತಾಕ್ಷೇಪ ಮಾಡುತ್ತಿದ್ದಾರೆ. ಇಲ್ಲಿ ಇರುವುದು ಅಧಿಕೃತವಾಗಿ ಕುಟುಂಬ ಸರ್ಕಾರ ಎಂದು ನಡ್ಡಾ ಆರೋಪ ಮಾಡಿದ್ದಾರೆ.
Kerala | BJP national president JP Nadda arrived in Thiruvananthapuram, earlier today pic.twitter.com/X6fP3HuQBu
— ANI (@ANI) September 26, 2022
ಕೇರಳದಲ್ಲಿ ಹಿಂಸಾಚಾರ ಮತ್ತು ಕೋಮು ಉದ್ವಿಗ್ನತೆ ಸೃಷ್ಟಿಸುವವರಿಗೆ ಮತ್ತು ಇದಕ್ಕೆ ಕುಮ್ಮಕ್ಕು ಕೊಡುವವರಿಗೆ ಸರ್ಕಾರ ಮೌನ ಬೆಂಬಲ ನೀಡುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.