LATEST NEWS
ಕಾಂಗ್ರೆಸ್ ನಾಯಕರ ಮನೆ ಅಂಗಳದಲ್ಲಿ ಸಾವರ್ಕರ್ ಭಾವಚಿತ್ರ ಹಾಕುತ್ತೇವೆ – ಯಶ್ ಪಾಲ್ ಸುವರ್ಣ

ಉಡುಪಿ ಅಗಸ್ಟ್ 17: ವೀರ ಸಾವರ್ಕರ್ ಬಾವಚಿತ್ರ ವಿವಾದ ಇದೀಗ ಹೆಚ್ಚಾಗುತ್ತಲೇ ಇದ್ದು, ಉಡುಪಿ ಬ್ರಹ್ಮಗಿರಿ ಸರ್ಕಲ್ ನಲ್ಲಿ ಹಾಕಲಾಗಿರುವ ವೀರ ಸಾವರ್ಕರ್ ಅವರ ಭಾವಚಿತ್ರಕ್ಕೆ ಇಂದು ಬಿಜೆಪಿ ಮುಖಂಡ ಯಶಪಾಲ್ ಸುವರ್ಣ ಅವರು ಪುಷ್ಪಾಚರಣೆ ಮಾಡಿದರು.
ಬಳಿಕ ಮಾತನಾಡಿದ ಅವರು ಪಿಎಫ್ಐ ಸಂಘಟನೆ ದೇಶದ ಅನಾಗರಿಕ ಸಂಘಟನೆಯಾಗಿದ್ದು, ಯಾರು ದೇಶಪ್ರೇಮಿ ಎಂದು PFI ಎಸ್ಡಿಪಿಐಗೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಡೋಂಗಿ ದೇಶಭಕ್ತರನ್ನು ಇಟ್ಟುಕೊಂಡಿದೆ, ಬ್ರಹ್ಮಗಿರಿ ಸರ್ಕಲಲ್ಲಿ ಸಾವರ್ಕರ್ ಪುತ್ಥಳಿಯನ್ನು ಅನಾವರಣ ಮಾಡುತ್ತೇವೆ ಅಲ್ಲದೆ ಕಾಂಗ್ರೆಸ್ ನಾಯಕರ ಅಂಗಳದಲ್ಲಿ ಸಾವರ್ಕರ್ ಭಾವಚಿತ್ರ ಹಾಕುತ್ತೇವೆ ಎಂದರು.

ಸ್ವಾತಂತ್ರ್ಯ ಸಂದರ್ಭ ಜಿನ್ನಾ ದೇಶ ವಿಭಜನೆ ಮಾಡಿದರು, ಇದೀಗ ಸಿದ್ದರಾಮಯ್ಯ ಮತ್ತೆ ದೇಶ ವಿಭಜನೆ ಮಾಡಲು ಹೊರಟಿದ್ದಾರೆ. ಸಿದ್ದರಾಮಯ್ಯ ಜಿನ್ನಾನ ಮತ್ತೊಂದು ರೂಪ ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅರಳು-ಮರಳಿನ ಹೇಳಿಕೆಯನ್ನ ಕೊಟ್ಟಿದ್ದಾರೆ, ಸಿದ್ದರಾಮಯ್ಯನ ಮನೆ ಅಂಗಳದಲ್ಲೂ ಸಾವರ್ಕರ್ ಭಾವಚಿತ್ರ ಹಾಕುತ್ತೇವೆ, ವೀರ ಸಾವರ್ಕರ್ ದೇಶಭಕ್ತಿ ಏನು ಎಂಬುದು ಕಾಂಗ್ರೆಸ್ ಗೆ ತೋರಿಸಿ ಕೊಡುತ್ತೇವೆ ಎಂದರು.