DAKSHINA KANNADA
ಕರಾವಳಿ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಅರುಣ್ ಕುಮಾರ್ ಪುತ್ತಿಲರದ್ದು ಎನ್ನಲಾದ ಪೋನ್ ಸಂಭಾಷಣೆ ಆಡಿಯೋ

ಪುತ್ತೂರು ಅಗಸ್ಟ್ 25: ಬಿಜೆಪಿಗೆ ಬಂಡಾಯದ ಮೂಲಕ ಬಿಸಿ ಮುಟ್ಟಿಸಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಮಹಿಳೆಯರೊಬ್ಬರ ಜೊತೆ ನಡೆಸಿದ ಭಾಷಣೆ ಆಡಿಯೋ ಇದೀಗ ವೈರಲ್ ಆಗಿದ್ದು, ಕರಾವಳಿಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಪುತ್ತೂರಿನ ಬಿಜೆಪಿ ಬಂಡಾಯ ಅಭ್ಯಾರ್ಥಿಯಾಗಿ ಸದ್ದು ಮಾಡಿದ್ದ ಪುತ್ತಿಲ ಅವರು ಬಿಜೆಪಿ ಮುಖಂಡೆಯೊಬ್ಬರ ಬಳಿ ಮಾತನಾಡಿರೋ ಆಡಿಯೋ ವೈರಲ್ ಆಗಿದೆ. ಪೋನ್ ಸಂಭಾಷಣೆಯಲ್ಲಿ ಮಹಿಳೆ ಪುತ್ತಿಲ ಅವರಿಗೆ ಬಿಜೆಪಿಗೆ ಸೇರಿದ್ದು ನಾಚಿಕೆ ಆಗಲಿಲ್ವ ಅಂತಾ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ರಾಜಕೀಯದಲ್ಲಿ ನಾಚಿಗೆ, ಹೇಸಿಗೆ ಥೂ ಅದೆಲ್ಲಾ ಇಲ್ಲಅದೆಲ್ಲಾ ಬಿಟ್ಟವರೇ ಪೊಲಿಟೀಶಿಯನ್, ಮಾನ ಮರ್ಯಾಧೆ ಎರಡು ಬಿಡದಿದ್ದರೇ ಉನ್ನತ ಹುದ್ದೆಗೆ ಹೋಗಲು ಸಾದ್ಯವಿಲ್ಲ ಎಂದು ಪುತ್ತಿಲ ಹೇಳಿದ್ದಾರೆ.

ಇನ್ನು ಪರಿವಾರದ ಜನ 3.5 ಕೋಟಿ ರೂ. ಹಣ ಪಡೆದಿದ್ದಾರೆ ಅನ್ನೊ ಬಗ್ಗೆಯೂ ಮಾತನಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಮಹಿಳೆ ‘ಸೌಶಯಾತ್ಮಾವೀ ಇನಶ್ಯತೀ’ ಎಂಬ ಸಂಸ್ಕೃತ ಶ್ಲೋಕ ಹೇಳಿದ್ದಾಳೆ. ಅಂದರೆ, ಸಂಶಯ ಪಟ್ಟವನು ನಾಶವಾಗುತ್ತಾನೆ. ನೀವು ನಾಶ ಆದ್ರಿ ಎಂದು ಮಹಿಳೆ ಮಾತನಾಡಿದ್ದಾಳೆ.
ಇನ್ನು ಅರುಣ್ ಪುತ್ತಿಲ ಅವರ ಹಣ ತೆಗೆದುಕೊಂಡಿದ್ದರ ಬಗ್ಗೆ ಪರೋಕ್ಷವಾಗಿ ಆಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ. ಇನ್ನು ಬಿಜೆಪಿ ನಾಯಕಿ ನೀವು ಬೆಂಗಳೂರಿನಲ್ಲಿ ಒಂಟಿಯಾಗಿ ಸಿಕ್ಕಾಗ ಹೆಚ್ಚಿನ ವಿಚಾರವನ್ನು ಮಾತನಾಡುವುದಾಗಿ ಹೇಳಿದ್ದಾರೆ. ಈಗ ಆಡಿಯೋ ರೆಕಾರ್ಡ್ ಮಾಡಿ ನಿಮಗೆ ಇವತ್ತು ಕಡ್ಡಿ ಇಟ್ಟಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ.