Connect with us

DAKSHINA KANNADA

ಬಜೆಟ್ ಘೋಷಣೆ 5 ತಿಂಗಳಲ್ಲಿ ಕಾರ್ಯರೂಪಕ್ಕೆ ಬಂದಿರುವುದು ಬಿಜೆಪಿಗೆ ಹೊಟ್ಟೆಉರಿ : ಐವನ್ ಡಿಸೋಜಾ

ಕಾಂಗ್ರೆಸ್ ಸರಕಾರವು ಬಜೆಟ್ ಘೋಷಣೆ ಮಾಡಿದ 5 ತಿಂಗಳಲ್ಲಿ ಮೀನುಗಾರರಿಗೆ ಸಂಬಂಧಿಸಿದದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಾಧನೆ ಮಾಡಿದೆ, ಬಿಜೆಪಿ ತನ್ನ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಯಾವ ಸಾಧನೆ ಮಾಡಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಾಕ್ಷ ಐವನ್ ಡಿಸೋಜ ಪ್ರಶ್ನಿಸಿದ್ದಾರೆ.

ಮಂಗಳೂರು: ಕಾಂಗ್ರೆಸ್ ಸರಕಾರವು ಬಜೆಟ್ ಘೋಷಣೆ ಮಾಡಿದ 5 ತಿಂಗಳಲ್ಲಿ ಮೀನುಗಾರರಿಗೆ ಸಂಬಂಧಿಸಿದದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಾಧನೆ ಮಾಡಿದೆ, ಬಿಜೆಪಿ ತನ್ನ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಯಾವ ಸಾಧನೆ ಮಾಡಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಾಕ್ಷ ಐವನ್ ಡಿಸೋಜ ಪ್ರಶ್ನಿಸಿದ್ದಾರೆ.

ಮಂಗಳೂರಿನಲ್ಲಿ ಶಾಸಕ ವೇದವ್ಯಾಸ ಕಾಮತ್ ಹಾಗೂ ಉಡುಪಿಯಲ್ಲಿ ಶಾಸಕ ಯಶಪಾಲ್ ಸುವರ್ಣ ನೇತೃತ್ವದ ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಸರಕಾರದ ವಿರುದ್ಧ ಆರೋಪ ಮಾಡಿರುವ ಬಗ್ಗೆ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯ ಮೂಲಕ ಪ್ರತ್ಯುತ್ತರ ನೀಡಿದರು.

ಮೀನುಗಾರರ ಬಗ್ಗೆ ಮಾತನಾಡುವ ಶಾಸಕ ವೇದವ್ಯಾಸ ಕಾಮತ್ ಅವರು, ಹೊಯ್ಗೆ ಬಜಾರ್‌ನಲ್ಲಿ ಹಲವು ವರ್ಷಗಳಿಂದ ನೆಲಬಾಡಿಗೆ ನೀಡಿ ವಾಸಿಸುತ್ತಿರುವ 150ಕ್ಕೂ ಅಧಿಕ ಮೀನುಗಾರ ಕುಟುಂಬಗಳಿಗೆ ಮನೆ ನೀಡುವಲ್ಲಿ ಏನು ಕೆಲಸ ಮಾಡಿದ್ದಾರೆ ಹೇಳಲಿ.

ಬೆಂಗ್ರೆಯಲ್ಲಿ ಹಕ್ಕುಪತ್ರ ನೀಡಲು ಆಸಕ್ತಿ ತೋರಿದ್ದ ಶಾಸಕರು ಈ ಮೀನುಗಾರ ಕುಟುಂಬಗಳ ಬಗ್ಗೆ ಗಮನ ಹರಿಸದೆ ದ್ವಿಮುಖ ನೀತಿ ಪ್ರದರ್ಶಿಸಿದ್ದಾರೆ.

ಹೊಯ್ಗೆಬಜಾರ್‌ನಲ್ಲಿ ಹಿಂದೆ ಚದರ ಮೀಟರ್‌ಗೆ 10 ರೂ. ಇದ್ದ ನೆಲಬಾಡಿಗೆಯನ್ನು 100 ರೂ.ಗಳಿಗೆ ಏರಿಕೆ ಮಾಡಿದ್ದು ಬಿಜೆಪಿ ಅವಧಿಯಲ್ಲಿ.

ನಮ್ಮ ಸರಕಾರ ಆಡಳಿತಕ್ಕೆ ಬಂದ ಬಳಿಕ ಈಗಾಗಲೇ ಈಬಗ್ಗೆ ಸಚಿವರ ಜತೆ ಚರ್ಚಿಸಲಾಗಿದೆ. ಅವರ ನೆಲಬಾಡಿಗೆಯನ್ನು ಮನ್ನಾ ಮಾಡುವುದಲ್ಲದೆ, ಭೂಮಿ ಹಕ್ಕನ್ನು ನೀಡಲು ಆಗ್ರಹಿಸಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಇದನ್ನು ಮಾಡಿ ತೋರಿಸುತ್ತೇವೆ ಎಂದು ಐವನ್ ಡಿಸೋಜಾ ಹೇಳಿದರು.

ರಿಜಿಸ್ಟ್ರಾರ್ ಕಚೇರಿಯಲ್ಲಿ ಸೈಬರ್ ವಂಚನೆ ನಡೆಯುತ್ತಿದೆ ಎಂದು ಶಾಸಕರು ಈ ಬಗ್ಗೆ ಕ್ರಮಕ್ಕೆ ಸರಕಾರವನ್ನು ಒತ್ತಾಯಿಸಬೇಕು.

ಅದಕ್ಕಾಗಿ ಪತ್ರಿಕಾಗೋಷ್ಟಿ ಮಾಡಿದರೆ ಸಾಲದು. ಶಾಸಕರಾಗಿ ಅವರೇನು ಮಾಡಬೇಕು ಅದನ್ನು ಮಾಡಲಿ. ನೋಂದಣಿ ಇಲಾಖೆಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದು, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಧಾರ್ ಲಿಂಕ್ ಮಾಡಲಾಗುತ್ತಿಲ್ಲ ಎಂಬ ಮಾಹಿತಿ ನೀಡಿದ್ದಾರೆ.

ವಂಚನೆ ಕುರಿತಂತೆ ದಾಖಲಾಗಿರುವ ದೂರಿನ ಬಗ್ಗೆ ಸೈಬರ್ ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ.

ನಮ್ಮ ಆಡಳಿತದ ಅವಧಿಯಲ್ಲಿ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಮೊದಲಾದ ಯೋಜನೆಗಳ ಬಗ್ಗೆ ಚರ್ಚೆಯಾಗುತ್ತಿದ್ದರೆ, ಬಿಜೆಪಿ ಅವಧಿಯಲ್ಲಿ ಪಿಎಸ್‌ಐ, 40 ಪರ್ಸೆಂಟ್, ಪೇ ಸಿಎಂ, ಬಿಟ್ ಕಾಯಿನ್, ಕೊರೋನ ಹಗರಣಗಳೇ ಚರ್ಚೆಯಾಗುತ್ತಿತ್ತು ಎಂದು ಐವನ್ ಡಿಸೋಜಾ ಎದಿರೇಟು ನೀಡಿದರು.

ಸರಕಾರ ಆಡಳಿತಕ್ಕೆ ಬಂದು ಐದು ತಿಂಗಳು ಮಾತ್ರವೇ ಸಂದಿವೆ. ಹಾಗಿದ್ದರೂ ಅಧಿಕಾರಕ್ಕೆ ಬಂದು ಕೆಲವೇ ದಿನಗಳಲ್ಲಿ ಸರಕಾರ ಬಜೆಟ್‌ನಲ್ಲಿ ಘೋಷಿಸಿದ ಹಲವು ಯೋಜನೆಗಳನ್ನು ಅನುಷ್ಟಾನಗೊಳಿಸಿದೆ.

ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದನ್ನೂ ಹಂತ ಹಂತವಾಗಿ ಅನುಷ್ಟಾನಗೊಳಿಸಲಿದೆ ಎಂದರು.ಐದು ತಿಂಗಳಲ್ಲಿ ಸರಕಾರ ಮಾಡಿರುವ ಸಾಧನೆ ಬಿಜೆಪಿಯವರನ್ನು ಕಂಗೆಡಿಸಿದೆ.

ಪತ್ರಿಕಾ ಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಅಶ್ರಫ್, ವಿಕಾಸ್ ಶೆಟ್ಟಿ, ಮನುರಾಜ್, ಅಶ್ರಫ್ ಬೆಂಗ್ರೆ, ಭಾಸ್ಕರ್ ರಾವ್, ಮೀನುಗಾರ ಸಮುದಾಯದ ಪ್ರಮುಖರಾದ ಮಿಥುನ್ ಬೆಂಗ್ರೆ, ನಿತಿನ್ ಪುತ್ರನ್, ಸರಳಾ ಕಾಂಚನ್ ಉಪಸ್ಥಿತರಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *