DAKSHINA KANNADA
ಯುವಮೋರ್ಚಾ ಬೈಕ್ ರಾಲಿ ಮಂಗಳೂರು ಕಡೆಗೆ
ಮಂಗಳೂರು,ಸೆಪ್ಟಂಬರ್ 6: ಬಿಜೆಪಿ ಯುವಮೋರ್ಚಾ ಮಂಗಳೂರಿನಲ್ಲಿ ನಾಳೆ ಆಯೋಜಿಸಿರುವ ಮಂಗಳೂರು ಚಲೋ ಬೈಕ್ ರಾಲಿಗೆ ರಾಜ್ಯದ ಎಲ್ಲಾ ಕಡೆಗಳಿಂದ ಬೈಕ್ ಗಳು ಮಂಗಳೂರಿಗೆ ತಲುಪಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಾರ್ಕಳದಿಂದಲೂ ಸುಮಾರು 1 ಸಾವಿರ ಬೈಕ್ ಗಳ ಮಂಗಳೂರು ಕಡೆಗೆ ಬರುತ್ತಿದೆ ಎನ್ನುವ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನಾಳೆ ಬೆಳಿಗ್ಗಿನಿಂದ ಸಂಜೆವರೆಗೆ ನಿರ್ಬಂಧಕ ಕಾಯ್ದೆಯನ್ನು ಮಂಗಳೂರು ಪೋಲೀಸ್ ಕಮಿಷನರ್ ಈಗಾಗಲೇ ಸ್ಪಷ್ಟಪಡಿಸಿದ್ದು, ಈ ನಡುವೆ ರಾಜ್ಯದ ಕೆಲವೆಡೆಗಳಿಂದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಬೈಕ್ ಮೂಲಕ ಮಂಗಳೂರು ನಗರದತ್ತ ಆಗಮಿಸುತ್ತಿದ್ದಾರೆ. ಪೋಲೀಸರ ಆದೇಶವನ್ನು ಧಿಕ್ಕರಿಸಿಯೂ ಬೈಕ್ ರಾಲಿಯನ್ನು ನಡೆಸುವುದಾಗಿ ಬಿಜೆಪಿ ಈಗಾಗಲೇ ಘೋಷಿಸಿದೆ. ರಾಜ್ಯ ಬಿಜಿಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರು ಈಗಾಗಲೇ ಮಂಗಳೂರು ಸೇರಿದ್ದಾರೆ.