Connect with us

DAKSHINA KANNADA

ಪುತ್ತೂರು ಬಿರುಮಲೆ ಗುಡ್ಡ ಪ್ರಕರಣ – ಅನ್ಯಮತೀಯ ಯುವಕರ ವಿರುದ್ದ ಪೋಕ್ಸೋ ಪ್ರಕರಣ ದಾಖಲು

ಪುತ್ತೂರು ಅಗಸ್ಟ್ 9: ಪುತ್ತೂರಿನ ಬಿರುಮಲೆ ಗುಡ್ಡೆಯಲ್ಲಿ ಅನ್ಯಕೋಮಿನ ಯುವಕರೊಂದಿಗೆ ಮಂಗಳೂರಿನ ಯುವತಿ ಪತ್ತೆ ಪ್ರಕರಣ ಈಗ ತಿರುವು ಸಿಕ್ಕಿದ್ದು, ಆರೋಪಿ ಯುವಕರ ವಿರುದ್ಧ ಅಪಹರಣ ಹಾಗೂ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.


ಅಪ್ರಾಪ್ತ ಯುವತಿಯೊಬ್ಬಳನ್ನು ಲೈಂಗಿಕ ಕಿರುಕುಳ ಕೊಡುವ ಉದ್ದೇಶದಿಂದ ಅಪಹರಿಸಿದ ಆರೋಪದಡಿ ಅನ್ಯ ಕೋಮಿನ ಮೂವರು ಯುವಕರ ವಿರುದ್ದ ಅಪಹರಣ ಹಾಗೂ ಪೋಕ್ಸೋ ಪ್ರಕರಣ ಪುತ್ತೂರು ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಮಹಮ್ಮದ್ ನಯೀಮ್, ಮಹಮ್ಮದ್ ತಾಸೀರ್, ಇಮ್ರಾನ್ ಎಂದು ಗುರುತಿಸಲಾಗಿದೆ.


ಅನ್ಯಮತೀಯ ಮೂರು ಯುವಕರ ಜೊತೆ ಹಿಂದೂ ಯುವತಿ ಬಿರುಮಲೆ ಗುಡ್ಡೆಯಲ್ಲಿ ಸ್ವೇಚ್ಚಾಚಾರ ನಡೆಸುತ್ತಿರುವಾಗ ಭಜರಂಗದಳದ ಕಾರ್ಯಕರ್ತರು ಗಮನಿಸಿ ಪೊಲೀಸರಿಗೆ ತಿಳಿಸಿದ್ದರು.  ಆದರೆ ಈಗ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಯುವತಿಯ ತಂದೆ ಲೈಂಗಿಕ ಕಿರುಕುಳ ನೀಡಲು ಅಪ್ರಾಪ್ತ ಯುವತಿಯನ್ನು ಅಪಹರಿಸಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ತಂದೆಯ ದೂರಿನ ಪ್ರಕಾರ “17 ವರ್ಷದ ನನ್ನ ಅಪ್ರಾಪ್ತ ಮಗಳು ಆಗಷ್ಟ್. 7ರಂದು ಸಂಜೆ 7.00 ಗಂಟೆಗೆ ಕೋಡಿಯಾಲ್ ಬೈಲಿನ ತನ್ನ ಮನೆಯಿಂದ ಎಂಪಾಯರ್ ಮಹಲ್ ಬಳಿ ಹೋಗಿ ಬರುತ್ತೇನೆಂದು ಹೋದವಳು ರಾತ್ರಿಯಾದರೂ ಮನೆಗೆ ಬಂದಿರುವುದಿಲ್ಲ. ಎಲ್ಲೆಡೆ ವಿಚಾರಿಸಿ ಹುಡುಕಿದರೂ ಮಗಳು ಪತ್ತೆಯಾಗಿರುವುದಿಲ್ಲ. ಮಗಳ ಹುಡುಕಾಟದಲ್ಲಿ ಇರುವಾಗಲೇ ಆಕೆ ಪುತ್ತೂರಿನ ಬೀರಮಲೆ ಗುಡ್ಡೆಯಲ್ಲಿ ಇರುವುದಾಗಿ ಆಗಸ್ಟ್.8 ರಂದು ಬೆಳಗ್ಗೆ ಮಾಹಿತಿ ಸಿಕ್ಕಿರುತ್ತದೆ. ‌ಅದರಂತೆ ಮಧ್ಯಾಹ್ನ ಪುತ್ತೂರಿನ ಬೀರಮಲೆಗುಡ್ಡೆಗೆ ಬಂದು ಪರಿಶೀಲಿಸಿದಾಗ ಮಗಳು ಆರೋಪಿಗಳ ಜೊತೆ ಕಾರಿನಲ್ಲಿ (ನಂಬ್ರ ಕೆಎಲ್-57 ಪಿ-4414 ) ಪತ್ತೆಯಾಗಿದ್ದಾಳೆ” ಎಂದು ಅಪ್ರಾಪ್ತ ಯುವತಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ಕಾರಿನಲ್ಲಿ ಆರೋಪಿಗಳಾದ ಮಹಮ್ಮದ್ ನಯೀಮ್, ಮಹಮ್ಮದ್ ತಾಸೀರ್, ಇಮ್ರಾನ್ ಎಂಬವರುಗಳ ಜೊತೆ ಮಗಳು ಪತ್ತೆಯಾಗಿದ್ದು , ಆಕೆಯನ್ನು ವಿಚಾರಿಸಿದಾಗ, ಆಗಸ್ಟ್ 7 ರಂದು ಸಂಜೆ ಆರೋಪಿಗಳು ಮಗಳಲ್ಲಿ ಮಾತನಾಡಲು ಇದೆ ಎಂದು ಹೇಳಿ ಪುಸಲಾಯಿಸಿಕೊಂಡು ತಮ್ಮ ಜೊತೆ ಕರೆದು ಹೋಗಿದ್ದಾರೆ ಎಂದು ‌ಆಕೆ ಹೇಳಿರುವುದಾಗಿ ‌ಆಕೆಯ ತಂದೆ ಆರೋಪಿಸಿದ್ದಾರೆ.

“ರಾತ್ರಿ ಬಿಜೈ ಬಳಿ ಒಂದು ಪ್ಲಾಟ್‌ ಗೆ ಮಗಳನ್ನು ಒತ್ತಾಯದಿಂದ ಕರೆದುಕೊಂಡು ಹೋಗಿ ಪಾರ್ಟಿ ಮಾಡಿ ರಾತ್ರಿಯಿಡಿ ಅಲ್ಲೆ ಉಳಿಸಿಕೊಂಡಿದ್ದಾರೆ. ಆಗಸ್ಟ್ 8 ರಂದು ಬೆಳಿಗ್ಗೆ 9.00 ಗಂಟೆಗೆ ಮಗಳು ಮನೆಗೆ ಹೋಗುತ್ತೇನೆಂದರೂ ಬಿಡದೆ ಪುತ್ತೂರಿನ ಸ್ನೇಹಿತೆಯನ್ನು ಭೇಟಿಯಾಗಲು ಇದೆ ಎಂದು ಹೇಳಿ ಪುಸಲಾಯಿಸಿ ಪುತ್ತೂರಿನ ಪರ್ಲಡ್ಕ ಬಳಿಯ ಬಿರುಮಲೆಗುಡ್ಡೆ ಎಂಬಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ಆಕೆಯ ತಂದೆ ದೂರಿದ್ದಾರೆ.

ಅಪ್ರಾಪ್ತೆ ಎಂದು ತಿಳಿದಿದ್ದರೂ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದಲೇ ಅಕ್ರಮವಾಗಿ ಕಾರಿನಲ್ಲಿ ಅಪಹರಿಸಿಕೊಂಡು ಪುತ್ತೂರಿನ ಬೀರಮಲೆಗುಡ್ಡೆಗೆ ಕರೆದುಕೊಂಡು ಬಂದಿದ್ದಾರೆ ಎಂದು ಅಪ್ರಾಪ್ತ ಬಾಲಕಿಯ ತಂದೆ ನೀಡಿದ ದೂರಿನಂತೆ ಪುತ್ತೂರಿನ ಮಹಿಳಾ ಠಾಣೆಯ ಪೊಲೀಸರು ಅಪಹರಣ ಹಾಗೂ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *