KARNATAKA
ಉಡುಪಿ : ಮಲ್ಪೆ ಪಡುಕೆರೆ ಬೀಚ್‌ನಲ್ಲಿ ಬಿಕಿನಿ ಫೊಟೋ ಶೂಟ್ ,ಪೊಲೀಸರ ಅಡ್ಡಿಗೆ ಚಡ್ಡಿ ಯುವತಿ ಕಿರಿಕ್ ..!!

ಉಡುಪಿ : ಉಡುಪಿಯ ಮಲ್ಪೆ ಪಡುಕೆರೆ ಬೀಚ್‌ನಲ್ಲಿ ಯುವತಿಯೊಬ್ಬರ ಬಿಕಿನಿ ಫೊಟೋಶೂಟ್ (Bikini photo Shoot) ಈಗ ವಿವಾದದ ಸ್ವರೂಪ ಪಡೆಯುತ್ತಿದ್ದು ಫೊಟೋ ಶೂಟ್‌ಗೆ ಅಡ್ಡಿಪಡಿದ್ದ ಪೊಲೀಸರ ವಿರುದ್ದ ಯುವತಿ ತಿರುಗಿ ಬಿದ್ದಿದ್ದಾಳೆ.
ಯುವತಿ ಬೀಚ್‌ನಲ್ಲಿ ಫೋಟೋ ಶೂಟ್ ಮಾಡುವುದನ್ನು ಕಂಡ ಸ್ಥಳೀಯರು ಅಕ್ಷೇಪ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಾರ್ವಜನಿಕರ ಮಾಹಿತಿ ಆಧಾರಿಸಿ ಸ್ಥಳಕ್ಕೆ ಬಂದ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯ ಫೋಟೊ ಶೂಟ್ ನಡೆಸುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.

ಆದ್ರೆ ಬಳಿಕ ಸ್ವತಃ ಯುವತಿ ಪೊಲೀಸರ ಮೇಲೆ ಆರೋಪಿಸಿದ್ದಾರೆ. ತನ್ನ ಇನ್ ಸ್ಟಾಗ್ರಾಮ್‌ನಲ್ಲಿ ಫೋಟೋಶೂಟ್ ಮಾಡಿದ ಫೋಟೋಗಳ ಸಹಿತ ಮಾಹಿತಿಯನ್ನು ಯುವತಿ ಹಂಚಿಕೊಂಡಿದ್ದಾರೆ. ನೈತಿಕ ಪೊಲೀಸ್ ಗಿರಿ ನಡೆಸಲು ಸ್ಥಳೀಯರು ಯಾರು? ಸಾರ್ವಜನಿಕ ಪ್ರದೇಶದ ಬೀಚ್‌ನಲ್ಲಿ ಫೊಟೋ ಶೂಟ್ ಮಾಡಿಕೊಂಡರೆ ತಪ್ಪೇನು? ಬಿಕಿನಿ ಹಾಕಿಕೊಂಡು ಫೋಟೋಶೂಟ್ ಮಾಡುವುದು ಕಾನೂನು ಉಲ್ಲಂಘನೆಯೇ?ಎಂದು ಜಾಲತಾಣದಲ್ಲಿ ಯುವತಿ ಪ್ರಶ್ನೆ ಮಾಡಿದ್ದಾಳೆ.