LATEST NEWS
ಕುಂದಾಪುರ – ಬೈಕ್ ಸ್ಕಿಡ್ ಆಗಿ ಬಿದ್ದು ಬೈಕ್ ಸವಾರ ಸಾವು

ಕುಂದಾಪುರ ಎಪ್ರಿಲ್ 24: ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಸವಾರ ಸಾವನಪ್ಪಿದ ಘಟನೆ ಕೋಟೇಶ್ವರದ ನಾಗಬನ ಕಟ್ಟೆ ಸಮೀಪದ ರಸ್ತೆಯಲ್ಲಿ ಎಪ್ರಿಲ್ 23ರ ಬೆಳಗ್ಗೆ ಸಂಭವಿಸಿದೆ. ಮೃತರನ್ನು ಕರ್ಕುಂಜೆ ಗ್ರಾಮದ ನೆಂಪು ಸರ್ಕಲ್ ಬಳಿಯ ನಿವಾಸಿ ಅರುಣ್ (34) ಎಂದು ಗುರುತಿಸಲಾಗಿದೆ.
ಅರುಣ್ ಅವರು ಸಂಬಂಧಿ ಸುಧಾಕರ ಅವರನ್ನು ಸಹ ಸವಾರರನ್ನಾಗಿ ಕರೆದುಕೊಂಡು ಬೀಜಾಡಿಗೆ ಬಂದು, ವಾಪಸ್ ಕೋಟೇಶ್ವರದ ಕಡೆಗೆ ಸಂಚರಿಸುತ್ತಿದ್ದ ವೇಳೆ ಕೋಟೇಶ್ವರದ ನಾಗಬನ ಬಳಿಯ ರಸ್ತೆಯಲ್ಲಿ ನಿಯಂತ್ರಣ ತಪ್ಪಿ, ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾರೆ. ಪರಿಣಾಮ ಎದೆ, ಕಾಲಿಗೆ ಗಂಭೀರ ಗಾಯಗೊಂಡ ಅರುಣ್ ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬೆಳಗ್ಗೆ 8.45 ರ ಸುಮಾರಿಗೆ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು. ಸಹ ಸವಾರ ಸುಧಾಕರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
