Connect with us

    BELTHANGADI

    ಬೆಳ್ತಂಗಡಿ – ಡಿವೈಡರ್ ಗೆ ಬೈಕ್ ಡಿಕ್ಕಿ ಸವಾರ ಸ್ಥಳದಲ್ಲೇ ಸಾವು

    ಬೆಳ್ತಂಗಡಿ ಅಕ್ಟೋಬರ್ 11: ಡಿವೈಡರ್‌ಗೆ ಬೈಕ್‌ ಢಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾಯನಕೆರೆ ಶಕ್ತಿನಗರದ ಬಳಿ ಅಕ್ಟೋಬರ್ 10 ರಂದು ನಡೆದಿದೆ. ಮೃತರನ್ನು ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ಗ್ರಾಮದ ಕಟ್ಟೆ ನಿವಾಸಿ ಸುಧೀಶ್‌ (30) ಎಂದು ಗುರುತಿಸಲಾಗಿದೆ.


    ಸುಧೀಶ್‌ ಅವರು ಯಾವುದೋ ಕಾರ್ಯನಿಮಿತ್ತ ಉಪ್ಪಿನಂಗಡಿಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ನಡೆದಿದೆ. ಈ ಅವಘಡದಲ್ಲಿ ಸುಧೀಶ್ ಅವರ ತಲೆಗೆ ಪೆಟ್ಟಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಸುಧೀಶ್‌ ಅವರು ಪೈಂಟಿಂಗ್‌ ವೃತ್ತಿ ನಡೆಸುತ್ತಿದ್ದರು. ಸುಧೀಶ್ ಅವರು ತಂದೆ, ಇಬ್ಬರು ಸಹೋದರಿಯರು, ಇಬ್ಬರು ಸಹೋದರರನ್ನು ಅಗಲಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply