DAKSHINA KANNADA
ಎನ್ಐಎ ತಂಡ ಸಂಚರಿಸುತಿದ್ದ ಪೊಲೀಸ್ ವಾಹನಕ್ಕೆ ಬೈಕ್ ಡಿಕ್ಕಿ : ಸೊಸೈಟಿ ಸಿಇಓ ಲಕ್ಷ್ಮಣ ನಾಯ್ಕ ಮೃತ್ಯು
ಪುತ್ತೂರು, ಮಾರ್ಚ್ 06: ಪುತ್ತೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ( ಎನ್.ಐ.ಎ) (NIA) ತಂಡ ಸಂಚರಿಸುತಿದ್ದ ಪೊಲೀಸ್ ವಾಹನ ಹಾಗೂ ಬೈಕ್ ಅಪಘಾತ ನಡೆದು ಬೈಕ್ ಸವಾರ ಮೃತಪಟ್ಟ ಘಟನೆ ಮಾ.5 ರಂದು ನಡೆದಿದೆ.ಮಾಣಿ ಮೈಸೂರು ರಸ್ತೆಯ ಸಂಪ್ಯ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಭಾನುವಾರ ರಾತ್ರಿ ವಿಶೇಷ ತನಿಖೆಯ ದೃಷ್ಠಿಯಿಂದ ಸಂಚರಿಸುತ್ತಿದ್ದ ಎನ್. ಐ. ಎ. ತಂಡದ ಪೊಲೀಸ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿದೆ.
ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ ನಾಯ್ಕ ಬಿ. (50) ಮೃತ ವ್ಯಕ್ತಿಯಾಗಿದ್ದಾರೆ.
ಪೊಲೀಸ್ ವಾಹನ ಜಿಲ್ಲೆಯ ಡಿ. ಆರ್. ಗೆ ಸೇರಿದ್ದಾಗಿದ್ದು, ಸುಳ್ಯ ಕಡೆಯಿಂದ ಪುತ್ತೂರಿಗೆ ಆಗಮಿಸುತ್ತಿದ್ದ ಸಂದರ್ಭ ಪುತ್ತೂರಿನಿಂದ ಆರ್ಲಪದವು ಕಡೆಗೆ ಹೋಗುತ್ತಿದ್ದ ಬೈಕ್ ಪೊಲೀಸ್ ವಾಹನಕ್ಕೆ ಡಿಕ್ಕಿಯಾಗಿದೆ.
ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳ ತಂಡ ಪುತ್ತೂರಿಗೆ ಆಗಾಗ ಆಗಮಿಸುತ್ತದೆ. ಆಗ ರಾಜ್ಯ ಪೊಲೀಸ್ ವಾಹನವನ್ನು ಅವರ ಸಂಚಾರಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಮಾಹಿತಿ ಲಬಿಸಿದೆ. ಪುತ್ತೂರು ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಪುತ್ತೂರು ಶಾಸಕ ಸಂಜೀವ ಮಟoದೂರು, ಡಿ.ವ್ಯ.ಎಸ್.ಪಿ.ವೀರಯ್ಯ ಹಿರೇಮಠ್, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ನಗರ ಸಭೆ ಮಾಜಿ ಸದಸ್ಯ ರಮೇಶ್ ಮೊಟ್ಟೆತಡ್ಕ, ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಶಿವಪ್ರಸಾದ್ ಪಾಣಾಜೆ, ಬಿಜೆಪಿ ಮುಖಂಡರಾದ ಶಶಿಕುಮಾರ್ ರೈ ಬಾಲ್ಯಟ್ಟು, ನಗರಸಭೆ ಸದಸ್ಯ ಪಿ.ಜಿ. ಜಗನಿವಾಸ್ ರಾವ್, ಓ. ಬಿ. ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಆರ್. ಸಿ. ನಾರಾಯಣ, ಬಿಜೆಪಿ ಎಸ್. ಟಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಮಂಜುನಾಥ್ ಯನು. ಎಸ್, ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ರಾಧಾಕೃಷ್ಣ ಬೋರ್ಕರ್, ಕಾಂಗ್ರೆಸ್ ಮುಕಂಡೆ ದಿವ್ಯಾಪ್ರಭಾ ಗೌಡ ಮತ್ತಿತ್ತರರು ಉಪಸ್ಥಿತರಿದ್ದರು.