LATEST NEWS
ಬೈಕ್ ಮತ್ತು ಸ್ಕೂಟಿಗೆ ಡಿಕ್ಕಿ ಹೊಡೆದ ಕಂಟೈನರ್ ಲಾರಿ – ಇಬ್ಬರು ಗಂಭೀರ

ಸುರತ್ಕಲ್ ಡಿಸೆಂಬರ್ 24: ಕಂಟೈನರ್ ಲಾರಿಯೊಂದು ಬೈಕ್ ಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ಕುಳಾಯಿ ಹೊನ್ನಕಟ್ಟೆ ಬಳಿ ನಡೆದಿದೆ.
ಮಂಗಳೂರು ಕಡೆಯಿಂದ ಸುರತ್ಕಲ್ ಭಾಗಕ್ಕೆ ತೆರಳುತ್ತಿದ್ದ ಮಲ್ಟಿ ಚೇಸ್ ಕಂಟೈನರ್ ಸಿಗ್ನಲ್ ಬಿದ್ದ ಹಿನ್ನಲೆ ಚಾಲಕನ ನಿಯಂತ್ರಣ ತಪ್ಪಿ ಬಲಭಾಗಕ್ಕೆ ತಿರುಗಿಸಿದ್ದಾನೆ ಎನ್ನಲಾಗಿದೆ. ಲಾರಿ ಡಿವೈಡರ್ ಏರಿ ಎದುರಿನಿಂದ ಬರುತ್ತಿದ್ದ ಸ್ಕೂಟಿ ಹಾಗೂ ಬೈಕ್ ಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಬೈಕ್ ನಲ್ಲಿ ಸಂಚರಿಸುತ್ತಿದ್ದ ಸವಾರರಿಬ್ಬರು ಮತ್ತು ಒರ್ವ ಪಾದಚಾರಿ ಮಹಿಳೆಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಘಟನೆಯಿಂದ ಬೈಕ್ ಮತ್ತು ಸ್ಕೂಟಿ ಸಂಪೂರ್ಣ ನಜ್ಜು ಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
