LATEST NEWS
ಓವರ್ ಟೇಕ್ ಬರದಲ್ಲಿ ಸ್ಕೂಟರ್ ಮತ್ತು ಬೈಕ್ ನಡುವೆ ಅಪಘಾತ – ಬೈಕ್ ಸವಾರ ಸಾವು

ಮಂಗಳೂರು ಮಾರ್ಚ್ 17: ಬೈಕ್ ಸವಾರನ ಓವರ್ ಟೇಕ್ ಬರದಲ್ಲಿ ನಡೆದ ಅಪಘಾತದಲ್ಲಿ ಬೈಕ್ ಸವಾರ ಸಾವನಪ್ಪಿದ ಘಟನೆ ನಗರದ ಹೊರವಲಯದ ಕಿನ್ನಿಗೋಳಿ ಎಂಬಲ್ಲಿ ಸೋಮವಾರ ನಡೆದಿದೆ.
ಮೃತರನ್ನು ವಿಜಯಪುರ ಇಂಡಿ ತಾಲೂಕು ಮೂಲದ ಹನುಮಂತ ಡೊಂಬರ (20) ಎಂದು ಗುರುತಿಸಲಾಗಿದೆ.

ಕಿನ್ನಿಗೋಳಿಯ ಬಟ್ಟಕೋಡಿಯಲ್ಲಿ ಬೈಕ್ ಸವಾರ ಬಸ್ ಓವರ್‌ಟೇಕ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಮುಂಭಾಗದಿಂದ ಬರುತ್ತಿದ್ದ ಮತ್ತೊಂದು ಬೈಕ್ ಸವಾರ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಈ ಪರಿಣಾಮ ಎರಡೂ ದ್ವಿಚಕ್ರ ವಾಹನ ಸವಾರರು ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಈ ಅಪಘಾತದಲ್ಲಿ ಕಟೀಲು ದೇವಸ್ಥಾನದಿಂದ ಹಿಂತಿರುತ್ತಿದ್ದ ಬೈಕ್ ಸವಾರ ಹನುಮಂತ ಮೃತಪಟ್ಟಿದ್ದಾರೆ. ಅಪಘಾತದ ಭೀಕರ ದೃಶ್ಯ ಸ್ಥಳೀಯ ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Continue Reading