LATEST NEWS
ಬೈಕ್ ಗೆ ಲಾರಿ ಡಿಕ್ಕಿ – ಅಬಕಾರಿ ಇಲಾಖೆಯ ಸಬ್ ಇನ್ಸ್‌ಸ್ಪೆಕ್ಟರ್ ಸಾವು

ಉಡುಪಿ ಡಿಸೆಂಬರ್ 30: ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಂಗಳೂರು ಅಬಕಾರಿ ಇಲಾಖೆಯ ಸಬ್ ಇನ್ಸ್‌ಸ್ಪೆಕ್ಟರ್ ಸಾವನ್ನಪ್ಪಿರುವ ಘಟನೆ ನಿನ್ನೆ ತಡ ರಾತ್ರಿ ಉಡುಪಿ ಹೊರ ವಲಯದ ಅಂಬಾಗಿಲಿನಲ್ಲಿ ನಡೆದಿದೆ. ಇಲ್ಲಿನ ಬ್ರಹ್ಮಾವರದ ಉಳ್ಳೂರು ನಿವಾಸಿ ಅಬಕಾರಿ ಇಲಾಖೆಯ ಸಬ್ ಇನ್ ಸ್ಪೆಕ್ಟರ್ ಶಂಕರ್ (52) ಮೃತ ದುರ್ದೈವಿಯಾಗಿದ್ದಾರೆ.
ಮಂಗಳೂರು ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ಮುಗಿಸಿ ಬಸ್ ನಿಂದ ಉಡುಪಿಗೆ ಬಂದಿದ್ದ ಇವರು ತಮ್ಮ ಬೈಕ್ ನಲ್ಲಿ ಉಳ್ಳೂರು ಕಡೆ ಹೋಗುತ್ತಿದ್ದಾಗ ಅತೀ ವೇಗದಿಂದ ಆಗಮಿಸಿದ ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದಿತ್ತು. ಬಳಿಕ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಯಿತಾದ್ರೂ, ಚಿಕಿತ್ಸೆ ಫಲಕರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
