LATEST NEWS
ಕ್ರಿಸ್‌ಮಸ್ ಸಂಭ್ರಮ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಬೈಕ್ ಅಪಘಾತ; ಇಬ್ಬರು ಯುವಕರ ದುರ್ಮರಣ..!

ಕಾಸರಗೋಡು : ಕೇರಳದ ಚಾಲಕುಡಿ ಎಂಬಲ್ಲಿ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ದಾರುಣ ಅಂತ್ಯ ಕಂಡಿದ್ದಾರೆ . ಕ್ರಿಸ್‌ಮಸ್ ಆಚರಣೆ ಮುಗಿಸಿ ವಾಪಸಾಗುತ್ತಿದ್ದ ಒರ್ವ ಯುವಕ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ನಿನ್ನೆ ಮಧ್ಯರಾತ್ರಿ ಚಾಲಕುಡಿಯ ಕಾಡುಕುಟ್ಟಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಾಡುಕುಟ್ಟಿ ಮೂಲದ ಮೆಲ್ವಿನ್ (33) ಮೃತ ವ್ಯಕ್ತಿಯಾಗಿದ್ದಾನೆ. ಮೆಲ್ವಿನ್ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ಮಧ್ಯರಾತ್ರಿಯ ಸುಮಾರಿಗೆ ಅಪಘಾತ ಸಂಭವಿಸಿದೆ. ಇದೇ ವೇಳೆ ಚಾಲಕುಡಿ ಮೇಲೂರಿನಲ್ಲಿ ಯುವಕನೊಬ್ಬ ಬೈಕ್ ನಿಯಂತ್ರಣ ತಪ್ಪಿ ಗದ್ದೆಗೆ ಬಿದ್ದಿದ್ದಾನೆ. ಪುಷ್ಪಗಿರಿ ಪಿಂಡಾಂಡಿ ನಾಯಿ ಮೇಳಿ ಹೊಳೆ ಬಳಿ ಅಪಘಾತ ಸಂಭವಿಸಿದೆ. ಚಾಲಕುಡಿ ವಿಆರ್ ಪುರಂನ ಉರುಂಬನ್ ಕುನ್ ನಿವಾಸಿ ಬಿನು (23) ಮೃತ ದುರ್ದೈವಿ. ಕುನ್ನಪ್ಪಿಳ್ಳಿಯಲ್ಲಿರುವ ತನ್ನ ಸ್ನೇಹಿತನ ಮನೆಯಲ್ಲಿ ಹಬ್ಬ ಮುಗಿಸಿ ಮನೆಗೆ ಮರಳುತ್ತಿದ್ದಾಗ ಅವಘಡ ಸಂಭವಿಸಿದೆ. ಬೆಳಗ್ಗೆ 6:30ರ ಸುಮಾರಿಗೆ ಸ್ಥಳೀಯರು ಶವವನ್ನು ಪತ್ತೆ ಮಾಡಿದ್ದಾರೆ.
