LATEST NEWS
ಬೈಕ್ ಗೆ ಲಾರಿ ಡಿಕ್ಕಿ – ವೃತ್ತಿಪರ ಚಿತ್ರಕಲಾವಿದ ರವಿಕುಮಾರ್ ಸಾವು

ಮಂಗಳೂರು ಎಪ್ರಿಲ್ 09: ಲಾರಿಯೊಂದು ಬೈಕ್ ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಸಾವನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಎಕ್ಕೂರು ಸಮೀಪ ನಡೆದಿದೆ.
ಮೃತರನ್ನು ಕೊಲ್ಯದ ಕನೀರುತೋಟ ನಿವಾಸಿ ರವಿಕುಮಾರ್ (55) ಎಂದು ಗುರುತಿಸಲಾಗಿದೆ. ಇವರು ಕೆಲಸದ ನಿಮಿತ್ತ ಕೊಲ್ಯದಿಂದ ಮಂಗಳೂರು ಕಡೆಗೆ ಬೈಕಿನಲ್ಲಿ ತೆರಳುವ ಸಂದರ್ಭ ಹಿಂಬದಿಯಿಂದ ಅತಿವೇಗ ಹಾಗೂ ಅಜಾಗರೂಕತೆ ಚಾಲನೆಯಿಂದ ಬಂದ ಲಾರಿ ಢಿಕ್ಕಿ ಹೊಡೆದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರೂ ಅದಾಗಲೇ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿದೆ.
