DAKSHINA KANNADA
ಬೈಕ್ ನಲ್ಲಿ ಪ್ರವಾಸ ಹೊರಟ್ಟಿದ್ದ ಪುತ್ತೂರಿನ ಯುವಕರಿಗೆ ಸರಣಿ ಅಪಘಾತ – ಒರ್ವ ಸಾವು ಇಬ್ಬರು ಗಂಭೀರ
ಪುತ್ತೂರು ಸೆಪ್ಟೆಂಬರ್ 06: ಬೈಕ್ ಗಳ ಮೂಲಕ ಪ್ರವಾಸಕ್ಕೆ ಹೊರಟಿದ್ದ ಯುವಕರ ತಂಡ ಸರಣಿ ಅಪಘಾತಕ್ಕೆ ಒಳಗಾಗಿದ್ದು, ಓರ್ವ ಸಾವನಪ್ಪಿದ್ದು, ಮತ್ತೆ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಲ್ಯಾಡಿ ಸಮೀಪದ ಬಳಿ ರಾಷ್ಟ್ರೀಯ ಹೆದ್ದಾರಿ -75ರಲ್ಲಿ ನಡೆದಿದೆ.
ಇಂದು ಬೆಳಗ್ಗೆ 11.30 ರ ಸುಮಾರಿಗೆ ಪುತ್ತೂರಿನಿಂದ 8 ಬೈಕುಗಳಲ್ಲಿ ತಂಡವೊಂದು ಬೈಕ್ ರೈಡಿಂಗ್ ಹೊರಟಿದೆ. ಅವುಗಳ ಪೈಕಿ ಕೆಟಿಎಂ ಬೈಕೊಂದು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಡಬ ತಾಲ್ಲೂಕಿನ ಎಂಜಿರ ಸಮೀಪ ತೆರಳುತ್ತಿದ್ದ ವೇಳೆ ಬೆಂಗಳೂರು ಕಡೆಯಿಂದ ಹೊಸ ವಾಹನಗಳನ್ನು ತುಂಬಿಕೊಂಡು ಬರುತ್ತಿದ್ದ ಕಂಟೈನರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ರಸ್ತೆಗೆ ಎಸೆಯಲ್ಪಟ್ಟ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೇಗದ ಚಾಲನೆಯಿಂದಾಗಿ ಅಪಘಾತವಾಗಿದ್ದು ಬೈಕಿನಿಂದ ರಸ್ತೆಗೆ ಎಸೆಯಲ್ಪಟ್ಟ ಯುವಕನ ಮೈಮೇಲೆ ಕಂಟೇನರ್ ಲಾರಿ ಹರಿದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಪುತ್ತೂರಿನಿಂದ ಉಪ್ಪಿನಂಗಡಿಯಾಗಿ ಸಕಲೇಶಪುರ ದತ್ತ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪ್ರಯಾಣ ಬೆಳೆಸಿ ಗಂಟೆ ಕಳೆಯುವಷ್ಟರಲ್ಲಿ ತಂಡದ ಒಂದು ಬೈಕ್ ನೆಲ್ಯಾಡಿಯ ರೇಖ್ಯಾ ಗ್ರಾಮದ ರೆಂಜಿರ ಎಂಬಲ್ಲಿ ವಿರುದ್ಧ ದಿಕ್ಕಿನಿಂದ ಬಂದ, ಹೊಸ ವಾಹನವನ್ನು ತುಂಬಿಕೊಂಡು ಮಂಗಳೂರು ಭಾಗಕ್ಕೆ ಬರುತ್ತಿದ್ದ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿಗೆ ಬೈಕ್ ಡಿಕ್ಕಿಹೊಡೆದ ರಭಸಕ್ಕೆ ಬೈಕ್ ಸವಾರ ಕುಂಬ್ರದ ಅರಿಯಡ್ಕ ಗ್ರಾಮದ ಕೌಡಿಚ್ಚಾರ್ ನಿವಾಸಿ ಮನೋಜ್ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮನೋಜ್ ಸಹಸವಾರನಾಗಿದ್ದ ಚೇತನ್ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ತಂಡದ ಬೇರೆ ಸವಾರರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಪ್ರದೇಶ ತಲುಪುವ ವೇಳೆಯಲ್ಲಿ ಮಾಹಿತಿ ಬಂದಿದೆ. ಗುಂಡ್ಯದಿಂದ ಘಟನಾ ಸ್ಥಳಕ್ಕೆ ಬರುತ್ತಿದ್ದ ವೇಳೆ ಇನ್ನೊಂದು ಬೈಕ್ ಕೂಡಾ ಸ್ಕಿಡ್ ಆಗಿದ್ದು,ಇಬ್ಬರಿಗೆ ಗಾಯವಾಗಿದೆ.ಸಚಿನ್ ಎಂಬಾತನ ಕಾಲು ಮರಿತವಾಗಿದ್ದು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ತಂಡದ ಉದ್ಘಾಟನೆಯ ಸಮಯದಲ್ಲೇ ವಿಘ್ನ ಎದುರಾಗಿತ್ತು. ಕುಂಬ್ರದಲ್ಲಿ ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಮೂರು ಬೈಕ್ ಗಳು ಪಲ್ಟಿಯಾಗಿತ್ತು ಅಂತಾ ತಿಳಿದುಬಂದಿದೆ. ‘ಡಾರ್ಕ್ ರೈಡರ್ಸ್’ ಅಂತಾ ಹೆಸರಿನ ತಂಡಕ್ಕೆ ಆರಂಭವೇ ಡಾರ್ಕ್ ಆಗಿದೆ. ಬೈಕ್ ಮೇಲೇರಿ ಊರೂರು ಸುತ್ತುವ ಕನಸಿನ ಬೈಕರ್‌ಗಳ ತಂಡಕ್ಕೆ ಆರಂಭವೇ ವಿಘ್ನವಾಗಿದ್ದು ಒಂದು ಅಮೂಲ್ಯ ಜೀವ ಬಲಿಯಾಗಿ, ಇಬ್ಬರ ಸ್ಥಿತಿ ಗಂಭೀರವಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.