DAKSHINA KANNADA
ಬೈಕ್ ಮೇಲೆ ಜಿಗಿದ ಕಡವೆ – ಸವಾರ ಸ್ಥಳದಲ್ಲೇ ಸಾವು

ಪುತ್ತೂರು ಅಕ್ಟೋಬರ್ 16: ಚಲಿಸುತ್ತಿದ್ದ ಬೈಕ್ ಮೇಲೆ ಕಡವೆಯೊಂದು ಜಿಗದ ಪರಿಣಾಮ ಬೈಕ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ನಡೆದಿದೆ. ಮೃತರನ್ನು ರಾಮಚಂದ್ರ ಅರ್ಬಿತ್ತಾಯ (50) ಎಂದು ಗುರುತಿಸಲಾಗಿದ್ದು, ಬೈಕ್ ನಲ್ಲಿದ್ದ ಸಹಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮುಂಜಾನೆ ಸುಮಾರು 5.45ರ ವೇಳೆಗೆ ತಮ್ಮ ಸಹೋದರನೊಂದಿಗೆ ಕುಲ್ಕುಂದಕ್ಕೆ ಶಟಲ್ ಬ್ಯಾಡ್ಮಿಂಟನ್ ಆಟ ಆಡಲು ತೆರಳುತ್ತಿರುವ ಸಂದರ್ಭ ಈ ಘಟನೆ ನಡೆದಿದೆ. ಕುಲ್ಕುಂದದ ಬಳಿ ಅವರು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಪಕ್ಕದ ಗುಡ್ಡ ದಿಂದ ಕಡವೆ ಹಾರಿತು. ಪರಿಣಾಮವಾಗಿ ಅರ್ಬಿತ್ತಾಯರ ಕುತ್ತಿಗೆಯ ಭಾಗಕ್ಕೆ ಬಲವಾದ ಏಟು ಬಿದ್ದು ಬೈಕ್ ಪಲ್ಟಿಯಾಯಿತು. ರಾಮಚಂದ್ರರು ಸ್ಥಳದಲ್ಲೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ. ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
