Connect with us

    LATEST NEWS

    ವಂಚಕರಿಗೆ 2 ಲಕ್ಷ ಕೊಟ್ಟು ಐಪಿಎಸ್ ಅಧಿಕಾರಿಯಾದ ಹುಡುಗ – ಬಿಹಾರದಲ್ಲೊಂದು ವಿಚಿತ್ರ ಕೇಸ್

    ಬಿಹಾರ ಸೆಪ್ಟೆಂಬರ್ 21: ಐಪಿಎಸ್ ಅಧಿಕಾರಿಯಾಗಲು ಎಷ್ಟೆಲ್ಲಾ ಕಷ್ಟಪಡಬೇಕು, ಆದರೆ ಇಲ್ಲೊಬ್ಬ ಹುಡುಗ ಕೇವಲ 2 ಲಕ್ಷ ಕೊಟ್ಟು ಐಪಿಎಸ್ ಅಧಿಕಾರಿಯಾಗಿ ಪೊಲೀಸ್ ವೇಷ ಧರಿಸಿ ತಿರುಗಾಡುತ್ತಿದ್ದ ಯುವಕ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅರೆಸ್ಟ್ ಆದ ಯುವಕನನ್ನು ಮಿಥಿಲೇಶ್ ಮಾಂಜಿ ಎಂಬ 18 ವರ್ಷದ ಯುವಕ. ಬಿಹಾರದ ಜುಮಾಯಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.


    ಪೊಲೀಸ್ ಆಗಬೇಕೆಂಬ ಕನಸು ಹೊಂದಿದ್ದ ಮಿಥಿಲೇಶ್, ಅದಕ್ಕಾಗಿ ಕಷ್ಟಪಟ್ಟು ಓದಿ ಯಶಸ್ಸು ಸಾಧಿಸುವುದು ಬಿಟ್ಟು ಎಡವಟ್ಟು ಮಾಡಿಕೊಂಡಿದ್ದಾನೆ. ಕೆಲ ದಿನಗಳ ಈತ ಯಾರದೋ ಮಾತು ನಂಬಿ ಉದ್ಯೋಗ ಕೊಡಿಸುವ ವಂಚಕರ ಜಾಲವನ್ನು ಸಂಪರ್ಕಿಸಿದ್ದಾನೆ. ಈತನ ಅಮಾಯಕತೆಯನ್ನು ದುರುಪಯೋಗ ಪಡಿಸಿಕೊಂಡ ವಂಚಕರು, ₹2 ಲಕ್ಷ ಪಡೆದು ಐಪಿಎಸ್ ಅಧಿಕಾರಿಗಳು ಹಾಕಿಕೊಳ್ಳುವ ಡ್ರೆಸ್ ಹಾಗೂ ನಕಲಿ ಪಿಸ್ತೂಲ್‌ ಅನ್ನು ಮಿಥಿಲೇಶನಿಗೆ ನೀಡಿದ್ದಾರೆ. ಬಳಿಕ ‘ಸದ್ಯ ನೀನು ಪ್ರೊಬೇಷನರಿ ಐಪಿಎಸ್ ಅಧಿಕಾರಿಯಾಗಿರುತ್ತಿಯ. ಜಿಲ್ಲೆಯಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ನಮಗೆ ಮಾಹಿತಿ ನೀಡುತ್ತಿರು‘ ಎಂದು ವಂಚಕರು ಹೇಳಿದ್ದಾರೆ.


    ಮಿಥಿಲೇಶ್ ಹಿಂದೂ ಮುಂದು ನೋಡದೇ ವಂಚಕರು ನೀಡಿದ ಐಪಿಎಸ್ ಡ್ರೆಸ್‌ ಅನ್ನು ಹಾಕಿಕೊಂಡು, ಪಿಸ್ತೂಲ್ ಇಟ್ಟುಕೊಂಡು ಪಲ್ಸರ್ ಬೈಕ್ ಏರಿ ತನ್ನ ಊರಾದ ಲಖಿಸಾರಿ ಜಿಲ್ಲೆಯ ಗೋವರ್ಧನ್ ಬಿಘಾಕ್ಕೆ ತೆರಳಿದ್ದಾನೆ. ಬಳಿಕ ತನ್ನ ತಾಯಿಯನ್ನು ಭೇಟಿಯಾಗಿ ತಾನು ಐಪಿಎಸ್ ಅಧಿಕಾರಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಅದೇ ಉಡುಗೆಯಲ್ಲಿ ವಾಪಸ್ ಜುಮಾಯಿಗೆ ಬಂದಿದ್ದ ಮಿಥಿಲೇಶ್ ಸಿಕಂದರಾ ಪೊಲೀಸ್ ಠಾಣೆ ವ್ಯಾಪ್ತಿಯ ಹೋಟೆಲ್ ಒಂದಕ್ಕೆ ತೆರಳಿ ತಿಂಡಿ ತಿನ್ನುತ್ತಿದ್ದ. ಈ ವೇಳೆ ಅನುಮಾನಗೊಂಡ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ಮಿಥಿಲೇಶ್‌ನನ್ನು ಬಂಧಿಸಿದ್ದಾರೆ.
    ಐಪಿಎಸ್ ಉಡುಗೆಯಲ್ಲಿ ಠಾಣೆಗೆ ಬಂದ ಮಿಥಿಲೇಶ್‌ನನ್ನು ಕಂಡು ಅಲ್ಲಿದ್ದ ಪೊಲೀಸರು ನಗೆ ಬೀರಿದ್ದಾರೆ. ನಕಲಿ ಪಿಸ್ತೂಲ್ ಹಾಗೂ ಡ್ರೆಸ್, ಪಲ್ಸರ್ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಪೊಲೀಸ್ ವಶದಲ್ಲಿರುವ ಮಿಥಿಲೇಶ್‌ ತನಗಾಗಿರುವ ವಂಚನೆಯನ್ನು ಹೇಳಿಕೊಂಡಿದ್ದಾನೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *