Connect with us

    LATEST NEWS

    ರಿವಾಲ್ವರಿನೊಂದಿಗೆ ಆಸ್ಪತ್ರೆಗೆ ಬಂದ ಜೆಡಿಯು ಶಾಸಕ..!

    ಶಾಸಕ ಗೋಪಾಲ್ ಮಂಡಲ್ ಅವರು ಬಿಹಾರ ದ ಭಾಗಲ್‌ಪುರದ ಜವಾಹರ್ ಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕೈಯಲ್ಲಿ ರಿವಾಲ್ವರ್‌ ಹಿಡಿದುಕೊಂಡು ಆಗಮಿಸಿ, ಭೀತಿ ಸೃಷ್ಟಿಸಿದ ಘಟನೆ ವರದಿಯಾಗಿದೆ. 

    ಪಾಟ್ನಾ: ಜೆಡಿ(ಯು) ಶಾಸಕ ಗೋಪಾಲ್ ಮಂಡಲ್ ಅವರು ಬಿಹಾರ ದ ಭಾಗಲ್‌ಪುರದ ಜವಾಹರ್ ಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕೈಯಲ್ಲಿ ರಿವಾಲ್ವರ್‌ ಹಿಡಿದುಕೊಂಡು ಆಗಮಿಸಿ, ಭೀತಿ ಸೃಷ್ಟಿಸಿದ ಘಟನೆ ವರದಿಯಾಗಿದೆ.

    ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಸಿಟಿ ಸ್ಕ್ಯಾನ್ ಗಾಗಿ ಮೊಮ್ಮಗಳೊಂದಿಗೆ ಮಂಡಲ್ ಆಸ್ಪತ್ರೆಗೆ ಬಂದಿದ್ದರು.

    ಪಿಸ್ತೂಲ್ ಬಗ್ಗೆ ಯಾರೋ ಶಾಸಕರನ್ನು ಪ್ರಶ್ನಿಸಿದಾಗ “ಇದು ಕೈಯಲ್ಲಿ ಹಿಡಿಯಬೇಕಾದ ವಸ್ತುವಾಗಿದೆ ಮತ್ತು ಸೊಂಟದಲ್ಲಿ ಅಲ್ಲ. (ಹಾತ್ ಮೆ ಲೇಕರ್ ನಹೀ ಚಲೇಗೇ ತೋ ಕ್ಯಾ ಕಮರ್ ಮೇ ರಾಖೇಗೆ).”ಎಂದಿದ್ದಾರೆ.

    “ಹಿಂದೆ ಕ್ರಿಮಿನಲ್‌ಗಳು ನನ್ನ ಹಿಂದೆ ಬಂದಿದ್ದರು, ಹೀಗಾಗಿ ಬಂದೂಕು ಹಿಡಿದು ಹೋಗುತ್ತಿದ್ದೆ, ಈಗ ರಾಜಕೀಯ ವ್ಯಕ್ತಿಗಳು ನನ್ನ ಹಿಂದೆ ಬಿದ್ದಿದ್ದಾರೆ,

    ಮುಂದಿನ ಚುನಾವಣೆಯಲ್ಲಿ ನಾನು ಸಂಸದನಾಗುತ್ತೇನೆ ಎಂದು ಅವರಿಗೆ ಗೊತ್ತು, ಹೀಗಾಗಿ ಅವರು ನನ್ನ ಹಿಂದೆ ಬಂದಿದ್ದಾರೆ.

    ಹಾಗಾಗಿ ನಾನು ಕೈಯಲ್ಲಿ ರಿವಾಲ್ವರ್ ಹಿಡಿದಿದ್ದೇನೆ. ಆತ್ಮರಕ್ಷಣೆಗಾಗಿ, ಯಾರಾದರೂ ಇಲ್ಲಿ ಅಥವಾ ಎಲ್ಲಿಯಾದರೂ ನನ್ನ ವಿರುದ್ಧ ಏನಾದರೂ ಧೈರ್ಯ ಮಾಡಿದರೆ, ನಾನು ಅವನನ್ನು ಶೂಟ್ ಮಾಡುತ್ತೇನೆ.

    ನಮ್ಮ ಸಮುದಾಯವು ನನಗೆ ಮತ ಚಲಾಯಿಸುವ ಹೆಚ್ಚಿನ ಸಂಖ್ಯೆಯ ಮತದಾರರನ್ನು ಹೊಂದಿದೆ ಮತ್ತು ಅವರು ನನ್ನನ್ನು ಸಂಸದರನ್ನಾಗಿ ಮಾಡುತ್ತಾರೆ, ರಿವಾಲ್ವರ್ ಹಿಡಿಯುವುದು ನನ್ನ ಶೈಲಿ ಮತ್ತು ಬೆಂಬಲಿಗರು ಅದನ್ನು ಇಷ್ಟಪಡುತ್ತಾರೆ ಎಂದು ಅವರು ಹೇಳಿದ್ದಾರೆ.

    ಮೊಮ್ಮಗಳ ಸಿಟಿ ಸ್ಕ್ಯಾನ್ ಮಾಡಿದ ನಂತರ ವರದಿ ಸಾಮಾನ್ಯವಾಗಿದೆ ಎಂದು ತಿಳಿದು ಬಂದಿದೆ,

     

    Share Information
    Advertisement
    Click to comment

    Leave a Reply

    Your email address will not be published. Required fields are marked *