FILM
ಬಾಲಿಕಾ ವಧು ಖ್ಯಾತಿಯ ಹಿಂದಿ ಕಿರುತೆರೆ ನಟ ಸಿದ್ದಾರ್ಥ ಶುಕ್ಲಾ ನಿಧನ

ಮುಂಬೈ ಸೆಪ್ಟೆಂಬರ್ 02: ಹಿಂದಿ ಚಿತ್ರನಟ ಸುಶಾಂತ್ ಸಿಂಗ್ ಸಾವನಪ್ಪಿದ ನಂತರ ಹಿಂದಿ ಚಿತ್ರರಂಗದಿಂದ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದ್ದು, ಕಿರುತೆರೆ ನಟ ಹಾಗೂ ಹಿಂದಿ ಬಿಗ್ ಬಾಸ್ ಸೀಸನ್ 13ರ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕೇವಲ 40 ವರ್ಷ ವಯಸ್ಸಾಗಿರುವ ಸಿದ್ದಾರ್ಥ ಶುಕ್ಲಾ ಹಿಂದಿ ಕಿರುತೆರೆಯಲ್ಲಿ ಅಭಿನಯಿಸುವ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದ ನಟ ಸಿದ್ಧಾರ್ಥ್ ಶುಕ್ಲಾ ಇನ್ನಿಲ್ಲ. ವೆಬ್ ಸರಣಿ, ಆಲ್ಬಂ ಸಾಂಗ್ ಹೀಗೆ ಬಣ್ಣದ ಲೋಕದಲ್ಲಿ ಸಕ್ರಿಯವಾಗಿದ್ದರು ಈ ನಟ. ಸಿದ್ಧಾರ್ಥ್ ಶುಕ್ಲಾ ಅವರು ಹಿಂದಿ ಬಿಗ್ ಬಾಸ್ ಸೀಸನ್ 13ರಲ್ಲಿ ಸ್ಪರ್ಧಿಸಿದ್ದು ವಿನ್ನರ್ ಆಗಿದ್ದರು. ಅವರು ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಶುಕ್ಲಾ ತನ್ನ ವೃತ್ತಿಜೀವನವನ್ನು ಮಾಡೆಲ್ ಆಗಿ ಆರಂಭಿಸಿದ ಅವರು ನಂತರ ಬಾಬುಲ್ ಕಾ ಆಂಗನ್ ಚೂಟೇ ನಾ” ಎಂಬ ದೂರದರ್ಶನ ಕಾರ್ಯಕ್ರಮದ ಪ್ರಮುಖ ಪಾತ್ರದೊಂದಿಗೆ ನಟನಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು “ಜಾನೆ ಪೆಚ್ಚಾನೆ ಸೇ … ಯೇ ಅಜ್ನಬ್ಬಿ”, “ಲವ್ ಯು ಜಿಂದಗಿ” ಮುಂತಾದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು ಬಾಲಿಕಾ ವಧು ಧಾರವಾಹಿ ಅವರಿಗೆ ಹೆಸರನ್ನು ತಂದುಕೊಟ್ಟಿತ್ತು.