DAKSHINA KANNADA
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಭೇಟಿ ನೀಡಿದ ಬಾಸ್ ವಿನ್ನರ್ ಚಂದನ್ ಶೆಟ್ಟಿ

ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಭೇಟಿ ನೀಡಿದ ಬಾಸ್ ವಿನ್ನರ್ ಚಂದನ್ ಶೆಟ್ಟಿ
ಪುತ್ತೂರು ಮಾರ್ಚ್ 1 : ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿಧ್ಯಾರ್ಥಿ ಸಂಘ ಮತ್ತು ರಕ್ಷಕ ಶಿಕ್ಷಕ ಸಂಘದ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಚಂದನ್ ಶೆಟ್ಟಿ ಆಗಮಿಸಿದ್ದರು.
ಇದೇ ಕಾಲೇಜಿನ ಹಳೆಯ ವಿಧ್ಯಾರ್ಥಿಯಾಗಿದ್ದ ಚಂದನ್ ಶೆಟ್ಟಿ , ಕನ್ನಡ ರಾಪರ್ ಆಗಿ, ಕನ್ನಡದ ಬಿಗ್ ಬಾಸ್ ಸೀಸನ್ 5ರ ವಿನ್ನರ್ ಆಗ ಹೊರಹೊಮ್ಮಿದ್ದರು, ಬಿಗ್ ಬಾಸ್ ವಿಜೇತರಾದ ನಂತರ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ್ದ ಚಂದನ್ ಶೆಟ್ಟಿ , ತಾನು ಕಲಿತ ಫಿಲೋಮೀನಾ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಚಂದನ್ ಶೆಟ್ಟಿ ಅವರನ್ನು ವಿಧ್ಯಾರ್ಥಿಗಳು ಓಪನ್ ಜೀಪ್ ನಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಚಂದನ್ ಶೆಟ್ಟಿ ಅವರನ್ನು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚಂದನ್ ಶೆಟ್ಟಿ ಕೊನೆಯಲ್ಲಿ ಮೂರೇ ಮೂರು ಹೆಗ್ , ಟಕೀಲಾ ಹಾಡುಗಳನ್ನು ಹಾಡಿ ವಿಧ್ಯಾರ್ಥಿಗಳನ್ನು ರಂಜಿಸಿದರು. ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಚಂದನ್ ಶೆಟ್ಟಿ ಅವರ ಕಾರ್ಯಕ್ರಮದ ಪ್ರತಿ ಕ್ಷಣವನ್ನು ಮೊಬೈಲ್ ನಲ್ಲಿ ಕ್ಲಿಕ್ಕಿಸಿಕೊಂಡರು, ಕೆಲವೂ ವಿಧ್ಯಾರ್ಥಿನಿಯರು ವೇದಿಕೆ ಹತ್ತಿ ಕನ್ನಡ ರಾಪರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.