FILM
ಚೈತ್ರಾ ಕುಂದಾಪುರಗೆ ಸುದೀಪ್ ಕ್ಲಾಸ್ ತೆಗೆದುಕೊಂಡ ವಾರ ಬಿಗ್ ಬಾಸ್ ಗೆ ಸೂಪರ್ ಟಿಆರ್ ಪಿ
ಬೆಂಗಳೂರು ನವೆಂಬರ್ 28: ಕಳೆದ ವಾರ ಚೈತ್ರಾ ಕುಂದಾಪುರ ಅವರು ಆಸ್ಪತ್ರೆಯಲ್ಲಿ ನಡೆದ ಘಟನೆ ಬಿಗ್ ಬಾಸ್ ಮನೆಯಲ್ಲಿ ಹೇಳಿ ಕಿಚ್ಚ ಸುದೀಪ್ ಅವರಿಂದ ಕ್ಲಾಸ್ ತೆಗೆದುಕೊಂಡಿದ್ದರು. ಆ ವಾರ ಬಿಗ್ ಬಾಸ್ ಗೆ ಸಖತ್ ಟಿಆರ್ ಪಿ ಬಂದಿದೆ.
ಚೈತ್ರಾ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ತೆರಳಿದ್ದರು, ಬಳಿಕ ಮತ್ತೆ ಬಿಗ್ ಬಾಸ್ ಮನೆಗೆ ಆಗಮಿಸಿದ್ದ ಅವರು ಆಸ್ಪತ್ರೆಯಲ್ಲಿನ ವಿಚಾರ ಹಾಗೂ ಹೊರಗೆ ನಡೆಯುತ್ತಿರುವ ಕೆಲವು ವಿಚಾರಗಳನ್ನು ಮನೆಮಂದಿಗೆ ಹೇಳಿ ಬಿಗ್ ಬಾಸ್ ನ ನಿಯಮ ಮುರಿದಿದ್ದರು. ಇದು ಸುದೀಪ್ ಅವರಿಗೆ ಕೋಪವನ್ನು ತರಿಸಿತ್ತು. ಕಾರ್ಯಕ್ರಮದಲ್ಲಿ ಸುದೀಪ್ ಚೈತ್ರಾ ಅವರಿಗೆ ಸರಿಯಾದೇ ಕ್ಲಾಸ್ ತೆಗೆದುಕೊಂಡಿದ್ದರು. ಸುದೀಪ್ ಅವರ ಪ್ರತಿಯೊಂದು ಮಾತಿಗೂ ವಾದ ಮಾಡಿದ್ದ ಚೈತ್ರಾ ಕುಂದಾಪುರ ವಿರುದ್ದ ಒಂದು ಕ್ಷಣ ಸಂಯಮ ಕಳೆದುಕೊಂಡಿದ್ದ ಕಿಚ್ಚ ಸುದೀಪ್ ಜೋರಾಗಿ ಕೂಗಾಡಿದ್ದರು. ಈ ಎಪಿಸೋಡ್ ನ ಬಳಿಕ ಚೈತ್ರಾ ಅವರು ಬಿಗ್ ಬಾಸ್ ನಿಂದ ಹೊರ ಹೋಗುವ ನಿರ್ಧಾರಕ್ಕೂ ಬಂದಿದ್ದರು. ಈಗ ಆ ವಾರದ ಟಿಆರ್ಪಿ ಹೊರ ಬಿದ್ದಿದೆ.
ವಾರದ ದಿನಗಳಲ್ಲಿ 8 (ನಗರ ಭಾಗ), ಶನಿವಾರ 9.5 (ನಗರ ಭಾಗ) ಹಾಗೂ ಭಾನುವಾರ 10.0 (ನಗರ ಭಾಗ) ಸಿಕ್ಕಿದೆ. ಇದು ಸುದೀಪ್ ಅವರ ನಿರೂಪಣೆಗೆ ಇರುವ ಗತ್ತು ಏನು ಎಂಬುದು ಸಾಬೀತಾಗಿದೆ. ಬಿಗ್ ಬಾಸ್ ಕೊನೆ ಹಂತಕ್ಕೆ ಹೋದಂತೆಲ್ಲ ಟಿಆರ್ಪಿ ಹೆಚ್ಚುತ್ತಲೇ ಹೋಗುವ ನಿರೀಕ್ಷೆ ಇದೆ.
2 Comments