ಬಿಗ್ ಬಾಸ್ ಸೀಸನ್ 12 ಕೊನೆಯ ಹಂತಕ್ಕೆ ಬಂದು ನಿಂತಿದೆ. ಇನ್ನು ಊಳಿದವರಲ್ಲಿ ಕೊನೆಯ ವಾರಕ್ಕೆ ಹೋಗುವವರು ಯಾರು ಎನ್ನುವುದು ಈ ವಾರದಲ್ಲಿ ತಿಳಿಯಲಿದೆ. ಈ ನಡುವೆ ಶನಿವಾರ ಎಂದಿನಂತೆ ಸುದೀಪ್ ಮತ್ತೆ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಈ ಬಾರಿ ಸುದೀಪ್ ಅವರು ರಕ್ಷಿತಾ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಲ್ಲಿ ರಘು ಹಾಗೂ ಗಿಲ್ಲಿ ಜೊತೆ ಆಪ್ತವಾಗಿದ್ದು, ಈ ವಾರ ಗಿಲ್ಲಿ ಜೊತೆ ಯಾರೂ ಇರಬಾರದೆಂದು ಬೀನ್ ಬ್ಯಾಗ್ ಗನ್ನು ಹೊರಗೆ ಇಟ್ಟಿದ್ದು ವಿಚಾರ ಸುದೀಪ್ ಪ್ರಶ್ನಿಸಿದ್ದಾರೆ. ಅಲ್ಲದೆ ಗಿಲ್ಲಿ ಮತ್ತು ರಘು ಜೊತೆ ಬೇರೆ ಯಾರೇ ಕ್ಲೋಸ್ ಆದರೂ ಇದನ್ನು ರಕ್ಷಿತಾ ಸಹಿಸೋದಿಲ್ಲ. ಈ ವಿಷಯವನ್ನು ಸುದೀಪ್ ಪ್ರಶ್ನೆ ಮಾಡಿದ್ದಾರೆ. ‘ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ’ ಎಂದು ರಕ್ಷಿತಾಗೆ ಪಾಠ ಮಾಡಲಾಗಿದೆ.
ಇನ್ನು, ಇದು ಈ ವಾರ ನಡೆಯೋದು ಕೊನೆಯ ಕಿಚ್ಚನ ಪಂಚಾಯ್ತಿ. ಏಕೆಂದರೆ ಮುಂದಿನ ವಾರ ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಈ ವಾರ ಧನುಷ್ ಅವರನ್ನು ಹೊರತುಪಡಿಸಿ ಉಳಿದವರು ಅಂದರೆ ಕಾವ್ಯಾ, ಗಿಲ್ಲಿ, ರಕ್ಷಿತಾ, ಅಶ್ವಿನಿ ಗೌಡ, ರಘು, ರಾಶಿಕಾ, ಅಶ್ವಿನಿ, ಧ್ರುವಂತ್ ನಾಮಿನೇಟ್ ಆಗಿದ್ದಾರೆ. ಇವರ ಪೈಕಿ ಒಬ್ಬರು ಈ ವಾರವರೇ ಎಲಿಮಿನೇಟ್ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಶೀಘ್ರವೇ ನಿರ್ಧಾರ ಆಗಲಿದೆ.
View this post on Instagram