FILM
ಮುಸ್ಲಿಂ ಧರ್ಮದವಳಾದರೂ ನಾನು ಮುಸ್ಲಿಂ ಹುಡುಗನನ್ನ ಮದುವೆ ಆಗಲಾರೆ ಎಂದ ಬಿಗ್ ಬಾಸ್ ಸ್ಪರ್ಧಿ

ಮುಂಬೈ: ನಾನು ಮುಸ್ಲಿಂ ಧರ್ಮದವಳಾದರೂ ಕೂಡ ಯಾವುದೇ ಕಾರಣಕ್ಕೂ ಮುಸ್ಲಿಂ ಹುಡುಗನನ್ನು ಮದುವೆ ಆಗಲಾರೆ ಎಂದು ಬಿಗ್ ಬಾಸ್ ಓಟಿಟಿ ಸ್ಪರ್ಧಿ ಉರ್ಫಿ ಜಾವೇದ್ ತಿಳಿಸಿದ್ದಾರೆ. ಸದಾ ತನ್ನ ವಿಭಿನ್ನವಾದ ಡ್ರೆಸ್ ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವ ಬಿಗ್ ಬಾಸ್ ಸ್ಪರ್ಧಿ ಇದೀಗ ತನ್ನ ಬೋಲ್ಡ್ ಹೇಳಿಕೆಯಿಂದ ಸುದ್ದಿಯಾಗಿದ್ದಾರೆ.
ಸಂದರ್ಶನ ಒಂದರಲ್ಲಿ ಮಾತನಾಡಿದ ಉರ್ಫಿ ನಾನು ಎಂದಿಗೂ ಮುಸ್ಲಿಂ ಹುಡುಗನನ್ನು ಮದುವೆ ಆಗಲಾರೆ ಎಂದ ಅವರು ಅದಕ್ಕೆ ಕಾರಣವನ್ನು ನೀಡಿದ್ದು, ಮಹಿಳೆಯರು ಹೀಗೆ ಇರಬೇಕು ಅಂತ ಮುಸ್ಲಿಂ ಪುರುಷರು ಬಯಸುತ್ತಾರೆ, ಅದು ನನ್ನ ಬಳಿ ಸಾಧ್ಯವಿಲ್ಲ.

ಅಲ್ಲದೆ ಅವರ ಧರ್ಮವನ್ನು ನಾನು ಟ್ರೋಲ್ ಆಗಿ ಹಾಳುಮಾಡುತ್ತಿದ್ದೀನಿ ಎಂದು ಹೇಳುತ್ತಿದ್ದಾರೆ. ನಾನು ಮುಸ್ಲಿಂ ಹುಡುಗಿ, ಮುಸ್ಲಿಂರಿಂದಲೇ ನನಗೆ ಬಹುತೇಕ ನೆಗೆಟಿವ್ ಕಾಮೆಂಟ್ಸ್ ಬರತ್ತೆ. ನಾನು ಇಸ್ಲಾಂ ಹೆಸರು ಹಾಳುಮಾಡುತ್ತಿದ್ದೇನೆ ಎಂದು ಅವರು ಹೇಳುತ್ತಿದ್ದಾರೆ.
ಅಲ್ಲದೆ ತಮ್ಮ ಕಮ್ಯುನಿಟಿಯಲ್ಲಿರುವ ಎಲ್ಲ ಮಹಿಳೆಯರನ್ನು ಅವರು ಕಂಟ್ರೋಲ್ ಮಾಡುತ್ತಾರೆ. ಇದೇ ಕಾರಣಕ್ಕೆ ನನಗೆ ಇಸ್ಲಾಂನಲ್ಲಿ ನಂಬಿಕೆ ಇಲ್ಲ. ಹೀಗಾಗಿಯೇ ನನ್ನನ್ನು ಟ್ರೋಲ್ ಮಾಡಲಾಗತ್ತೆ. ಅವರು ಬಯಸಿದ ರೀತಿಯಲ್ಲಿ ನಾನು ಇರಲು ಆಗೋದಿಲ್ಲ” ಎಂದು ಉರ್ಫಿ ಜಾವೇದ್ ಸಂದರ್ಶನದಲ್ಲಿ ಹೇಳಿದ್ದಾರೆ.