LATEST NEWS
ಉಳ್ಳಾಲ – ಬಲೆಗೆ ಬಿದ್ದ 75 ಕೆಜಿ ತೂಕದ ಪಿಲಿ ತೊರಕೆ ಮೀನು

ಉಳ್ಳಾಲ, ಸೆಪ್ಟೆಂಬರ್ 28 :ದೊಡ್ಡ ಗಾತ್ರದ ಪಿಲಿ ತೊರಕೆ ಮೀನು ಮೀನುಗಾರರ ಬಲೆಗೆ ಬಿದ್ದ ಘಟನೆ ಸೋಮೇಶ್ವರ ಉಚ್ಚಿಲ ಸಮುದ್ರ ತಟದಲ್ಲಿ ನಡೆದಿದೆ.
ಉಚ್ಚಿಲ ಪೆರಿಬೈಲ್ ನಿವಾಸಿ ನಾಡದೋಣಿ ಮೀನುಗಾರರಾದ ಶೈಲೇಶ್ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಝ್, ಕಲ್ಪೇಶ್ ಮತ್ತು ಶಂಭು ನ್ಯೂ ಉಚ್ಚಿಲ ಎಂಬವರು ಸಮುದ್ರ ತೀರದಲ್ಲಿ ಹಾಕಲಾಗಿದ್ದ ಬಲೆಗೆ ಈ ಮೀನು ಬಿದ್ದಿದೆ.

ಸುಮಾರು 75 ಕೆ.ಜಿ ಯ ತೂಕವನ್ನು ಈ ಮೀನು ಹೊಂದಿದೆ.ಈ ಮೀನಿಗೆ ಒಂದು ಕೆಜಿಗೆ ಸುಮಾರು 200 ರೂಪಾಯಿ ಬೆಲೆ ಇದ್ದು, ಆದರೆ ಸಿಕ್ಕ ಮೀನನ್ನು ವ್ಯಾಪಾರ ಮಾಡದೇ , ಈದ್ ಹಬ್ಬ ಇರುವುದರಿಂದ ತಮ್ಮೊಳಗೆ ಹಂಚಿಕೊಂಡಿದ್ದಾರೆ.
Continue Reading