Connect with us

DAKSHINA KANNADA

ಕಡಬ – ಕಾರಿನ ಮೇಲೆ ಬಿದ್ದ ಬೃಹತ್ ಗಾತ್ರದ ಮಾವಿನ ಮರ

ಪುತ್ತೂರು ಮೇ 27: ನಿಲ್ಲಿಸಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಮಾವಿನ ಮರ ಬಿದ್ದ ಘಟನ ಕಡಬ ತಾಲೂಕಿನ‌ ರಾಮಕುಂಜದಲ್ಲಿ ನಡೆದಿದೆ.

ಅಬ್ದುಲ್ಸಲೀಂ ಎಂಬವರು ರಾಮಕುಂಜದ ರಸ್ತೆ ಬದಿ ತನ್ನ ಮಾರುತಿ 800 ಕಾರನ್ನು ನಿಲ್ಲಿಸಿ ಹೊರ ಹೋಗಿದ್ದರು. ಕಾರಿನಲ್ಲಿ ‌ ರಹಿಮಾನ್, ಅಬ್ಬಾಸ್ ಹಾಗೂ ರಮ್ಲಾನ್ ಕುಳಿತಿದ್ದರು. ಈ ವೇಳೆ ಮರ ಬೀಳುವ ಶಬ್ದ ಕೇಳಿ ಮೂವರು ಕಾರಿನಿಂದ ಇಳಿದು ದೂರ ಹೋಗಿದ್ದಾರೆ.

ಅಷ್ಟರಲ್ಲೇ ಮಾವಿನ ಮರ ಕಾರಿ‌ನ ಮೇಲೆ ಬಿದ್ದಿದೆ. ಕಾರು‌ ಸಂಪೂರ್ಣ ಜಖಂಗೊಂಡು ಹಾನಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *