LATEST NEWS
ಭೂಮಿಕಾ ಟೆಕ್ಸಟೈಲ್ಸ್ ಮಾಲಕಿ ಸುಮಾ ಸತೀಶ್ ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು ಮಾರ್ಚ್ 16: ಮಂಗಳೂರಿನ ಭೂಮಿಕಾ ಟೆಕ್ಸ್ ಟೈಲ್ಸ್ ಮಾಲಕಿ ಸುಮಾ ಸತೀಶ್ ಅವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾರ್ಚ್ 15 ರಂದು ನಡೆದಿದೆ. ಅನಾರೋಗ್ಯದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಇವರು ನಗರದ ಖ್ಯಾತ ಬಟ್ಟೆ ಉದ್ಯಮಿ ಪಿ.ಕೆ. ದೂಜ ಪೂಜಾರಿ ಅವರ ಸೊಸೆಯಾಗಿದ್ದಾರೆ.
ನಗರದ ಮಣ್ಣಗುಡ್ಡೆಯ ಅಭಿಮಾನ್ ಪ್ಯಾಲೇಸ್ನ ಫ್ಲ್ಯಾಟ್ನಲ್ಲಿ ವಾಸವಿದ್ದ ಅವರು, ಫ್ಲ್ಯಾಟ್ನೊಳಗೆ ನೇಣು ಬಿಗಿದುಕೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾ ಸತೀಶ್ ರವರು ಉದ್ಯಮಿಯಾಗಿ ಮಾತ್ರವಲ್ಲದೆ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. ಅಲ್ಲದೇ ಲಯನ್ಸ್ ಕ್ಲಬ್ ನ ಸದಸ್ಯರು ಆಗಿದ್ದಾರೆ.

ಈ ಕುರಿತು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾತನಾಡಿ, ” ಕ್ಯಾನ್ಸರ್ ಇರುವ ಬಗ್ಗೆ ತಿಳಿದುಬಂದಿದ್ದು ಈ ಹಿನ್ನಲೆಯಲ್ಲಿ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ “ಎಂದು ಶಂಕೆ ವ್ಯಕ್ತಪಡಿಸಿದ್ದಾರೆ .