Connect with us

    FILM

    ಸಖತ್ ಹಾಟ್ ಅವತಾರದಲ್ಲಿ ಕುಂದಾಪುರ ಬೆಡಗಿ ಕಿನ್ನರಿ ಭೂಮಿಶೆಟ್ಟಿ…!!

    ಬೆಂಗಳೂರು ಮೇ 12 : ಕಿನ್ನರಿ ಧಾರವಾಹಿಯ ಮೂಲಕ ಮನೆ ಮಾತಾಗಿದ್ದ ನಟಿ ಭೂಮಿ ಶೆಟ್ಟಿ ಬಳಿಕ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲೂ ಸ್ಪರ್ಧೆ ಮಾಡಿದ್ದರು, ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಆಗಿರುವ ಭೂಮಿ ಶೆಟ್ಟಿ ಇತ್ತಿಚೆಗೆ ಪೋಸ್ಟ್ ಮಾಡಿರುವ ಪೋಟೋಗಳು ಸಖತ್ ವೈರಲ್ ಆಗಿದೆ.


    ನಟಿ ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಇದೀಗ ಬೋಲ್ಡ್ ಫೋಟೋ ಶೂಟ್ ಮಾಡಿಸುವ ಮೂಲಕ ಸದ್ದು ಮಾಡುತ್ತಿದ್ದಾರೆ. ತುಂಡು ಬಟ್ಟೆ ತೊಟ್ಟ ಭೂಮಿಕಾ ಫೋಟೋಸ್​​ಗಳನ್ನು ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದು ವೈರಲ್‌ ಆಗಿದೆ. ಕುಂದಾಪುರದ ಕೃಷ್ಣ ಸುಂದರಿ ಮೊದಲಿಂದ ಸಿಕ್ಕಾಪಟ್ಟೆ ಬೋಲ್ಡ್ ಹುಡುಗಿ ಕೂಡ ಹೌದು.

    ಯಾರು ಏನೇ ಹೇಳಲಿ.. ಯಾರು ಏನಾದರೂ ಅಂದುಕೊಳ್ಳಲಿ.. ನಾನು ಇರುವುದೇ ಹೀಗೆ ಎನ್ನುವ ಧೋರಣೆ ಇವರದ್ದು. ಸೀರೆಗೂ ಸೈ.. ಪಾರ್ಟಿ ವೇರ್ ಡ್ರೆಸ್ ಗಳಿಗೂ ಜೈ ಅನ್ನುವ ಭೂಮಿ ಶೆಟ್ಟಿ ಆಗಾಗ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚುವ ಕೆಲಸವನ್ನ ಪ್ರಾಮಾಣಿಕವಾಗಿ ಮಾಡ್ತಾನೇ ಬಂದಿದ್ದಾರೆ. ತಮ್ಮ ಹೊಸ ಫೋಟೋಗಳ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.


    ʼಇಕ್ಕಟ್‌ʼ ಸಿನಿಮಾದ ಮೂಲಕ ಮುನ್ನೆಲೆಗೆ ಬಂದಿದ್ದ ನಟಿ, ತೆಲುಗು ಸಿನಿರಂಗದಲ್ಲಿಯೂ ಸಖತ್‌ ಫೇಮಸ್‌. ʼನಿನ್ನೆ ಪೆಲ್ಲಡತಾʼ ʼಅಕ್ಕ ಚೆಲ್ಲಲ್ಲುʼ ಧಾರಾವಾಹಿ ಮೂಲಕ ತೆಲುಗು ಕಿರುತೆರೆ ಪ್ರೇಕ್ಷಕರಿಗೆ ಭೂಮಿಕಾ ಪರಿಚಯವಾದರು. ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಬೋಲ್ಡ್‌ ಆಗಿಯೇ ಎಕ್ಸ್‌ಪೀರಿಮೆಂಟ್‌ ಮಾಡುತ್ತಿರುತ್ತಾರೆ ನಟಿ ಭೂಮಿ ಶೆಟ್ಟಿ. ಅದರಲ್ಲೂ ಬಗೆಬಗೆ ಫೋಟೋಗಳನ್ನು ಶೇರ್‌ ಮಾಡಿಕೊಂಡೇ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಹಿಪ್ಪಿ ಹೇರ್‌ಸ್ಟೈಲ್‌ನಲ್ಲಿ ಮಿಂಚಿದ್ದರು ಈ ನಟಿ. ಈಗ ಬಿರು ಬೇಸಿಗೆಯಲ್ಲಿ ಮತ್ತಷ್ಟು ಹಾಟ್‌ ಅವತಾರದಲ್ಲಿ ಎದುರಾಗಿದ್ದಾರೆ.


    ಹಾಟ್‌ ಅವತಾರದಲ್ಲಿ ಎದೆ ಮುಚ್ಚುವ ತುಂಡು ಉಡುಗೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಭೂಮಿ ಶೆಟ್ಟಿ ಹೀಗೆ ಫೋಟೋ ಹಂಚಿಕೊಳ್ಳುತ್ತಿದ್ದಂತೆ, ತರಹೇವಾರಿ ಕಾಮೆಂಟ್‌ಗಳು ಬಂದಿವೆ.

    Share Information
    Advertisement
    Click to comment

    You must be logged in to post a comment Login

    Leave a Reply