KARNATAKA
ಭಟ್ಕಳ – ಮಂಜಾನೆ ಹೊತ್ತಿ ಉರಿದ ಜೆಎಂಎಫ್ಸಿ ನ್ಯಾಯಾಲಯ

ಭಟ್ಕಳ ಜುಲೈ 2: ಭಟ್ಕಳದ ಪ್ರಧಾನ ಮತ್ತು ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಲಯಗಳ ಸಂಕೀರ್ಣ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ದಾಖಲೆಗಳು ಸುಟ್ಟು ಹೋಗಿರುವುದಾಗಿ ವರದಿಯಾಗಿದೆ.
ಇಂದು ಮುಂಜಾನೆ 4.30ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ನಿಂದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಹಲವಾರು ದಾಖಲಾತಿಗಳು ಸುಟ್ಟು ಬೂದಿಯಾಗಿವೆ. ನ್ಯಾಯಾಲಯದ ಪೀಠೋಪಕರಣ, ಬೀರುಗಳಲ್ಲಿದ್ದ ಕಡತಗಳು ಹಾಗೂ ಮೇಲ್ಚಾವಣೆ ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಸುದ್ದಿ ತಿಳಿಯುತ್ತಿದ್ದಂತೆ ಹಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ ಶಿವಪೂಜಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
