LATEST NEWS
ಮತ್ತೆ ಗುಡುಗಿದ ಶಾಸಕ ಭರತ್ ಶೆಟ್ಟಿ – ಹಿಂದುತ್ವದ ವಿರುದ್ದ ಮಾತನಾಡ್ತಾರೋ ಅವರಿಗೆ ಇದೇ ಟ್ರೀಟ್ ಮೆಂಟ್
ಮಂಗಳೂರು ಜುಲೈ 13 : ಪ್ರತಿಭಟನೆ ಸಂದರ್ಭ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ದ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಶಾಸಕ ಭರತ್ ಶೆಟ್ಟಿ ಮೇಲೆ ಎಫ್ಐಆರ್ ದಾಖಲಾಗಿದ್ದು, ಇದನ್ನು ವಿರೋಧಿಸಿ ಬಿಜೆಪಿ ಇಂದು ಕಾವೂರಿನಲ್ಲಿ ಪ್ರತಿಭಟನೆ ನಡೆಸಿತು.
ಈ ಪ್ರತಿಭಟನಾ ಸಭೆಯಲ್ಲಿ ವಿಧಾನ ಸಭಾ ವಿಪಕ್ಷ ನಾಯಕ ಆರ್ ಅಶೋಕ್, ಶಾಸಕ ಸುನಿಲ್ ಕುಮಾರ್,ಸಂಸದ ಕ್ಯಾ.ಬ್ರಿಜೇಶ್ ಚೌಟ ಸೇರಿ ಶಾಸಕರು ಭಾಗಿಯಾಗಿದ್ದರು. ಈ ವೇಳೆ ಕಾಂಗ್ರೇಸ್ ಸರಕಾರದ ವಿರುದ್ದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಆರ್ ಅಶೋಕ್ ಹಿಂದೂ ಧರ್ಮ ಉಳಿದರೆ ದೇಶ ಉಳಿಯುತ್ತೆ, ಮೂಡ ವಿಚಾರದಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆ, ಮೈಸೂರಿನಲ್ಲಿ ಪ್ರತಿಭಟನೆಯಲ್ಲಿ ದಿಕ್ಕಾರ ಕೂಗಿದ್ದೇನೆ, ಈ ಹೋರಾಟ ಪೋಲಿಸ್ ವಿರುದ್ದ ಅಲ್ಲ ಆದರೆ , ಪೋಲಿಸರ ಹಿಂದೆ ಕಾಣದ ಕೈಗಳು ಇದೆ, ಎಲ್ಲಾ ಬಿಜೆಪಿ ನಾಯಕರ ಮೇಲೆ ಕೇಸ್ ಮಾಡುತ್ತಿದ್ದಾರೆ ಈ ಮೂಲಕ ಬಿಜೆಪಿ ಶಾಸಕರ ಮೇಲೆ ಭಯ ಪಡಿಸುವ ಹುನ್ನಾರ ನಡೆಯುತ್ತಿದೆ ಎಂದರು. ಕಾಂಗ್ರೆಸ್ ಅವರು ನರೇಂದ್ರ ಮೋದಿ ಹತ್ಯೆ ಮಾಡಬೇಕು ಅನ್ನುವವರಿಗೆ ಅಧಿಕಾರ ಕಟ್ಟಿದ್ದಾರೆ.
ಬಿಜೆಪಿ ಹೋರಾಟದ ಮುಖಾಂತರ ಬಂದಿದೆ , ಮಜಾ ಮಾಡಿ ಬಂದ ಪಕ್ಷ ಅಲ್ಲ, ಪಾಕಿಸ್ಥಾನ ಜೈ ಅನ್ನುವವರಿಗೆ ಮಂಗಳೂರಿನಲ್ಲಿ ಇರಲು ಬಿಡಲ್ಲ, ಪೋಲಿಸರಿಗೆ ಭಯ ಪಡುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ, ನಮ್ಮ ಮೈಯಲ್ಲಿ ಹರಿಯುತ್ತಿರುವುದು ಭಾರತ ಮಾತೆಯ ರಕ್ತ ಎಂದು ಅಶೋಕ್ ಹೇಳಿದರು. ಈ ವೇಳೆ ಮಾತನಾಡಿದ ಭರತ್ ಶೆಟ್ಟಿ ಮತ್ತೆ ಕಾಂಗ್ರೇಸ್ ವಿರುದ್ದ ಹರಿಹಾಯ್ದುರು ಹಿಂದುತ್ವದ ವಿರುದ್ದ ಯಾರು ಮಾತನಾಡ್ತಾರೋ ಅವರಿಗೆ ಇದೇ ಟ್ರಿಟ್ ಮೆಂಟ್ ಅಂದ ಅವರು ಕಾಂಗ್ರೇಸ್ ನವರು ಪ್ರತಿಭಟನೆ ಅಂತ ರಸ್ತೆಯಲ್ಲಿ ನಾಲ್ಕೈದು ಜನ ನಿಂತು ಡಿಸ್ಕೋ ಡ್ಯಾನ್ಸ್ ಮಾಡುತ್ತಾರೆ ಎಂದರು. ನಾವು ಯಾವುದೇ ಕಾಂಗ್ರೇಸ್ ಕಾರ್ಯಕರ್ತರ ಮೈಮುಟ್ಟುವುದಿಲ್ಲ, ಆದರೆ ಹಿಂದುತ್ವದ ವಿರುದ್ದ ಮಾತನಾಡಿದರೆ ನಾವು ಬಿಡುವುದಿಲ್ಲ ಎಂದರು.
ಈ ವೇಳೆ ಮಾತನಾಡಿದ ಶಾಸಕ ಸುನಿಲ್ ಕುಮಾರ್ ರಾಹುಲ್ ಗಾಂಧಿ ಯಾರಾದ್ರು ಹೊಡಿಬೆಕಿತ್ತು ಅಂದಿದ್ಧಕ್ಕೆ ಇಷ್ಟು ಉರಿಬಿದ್ದಿದೆ, ಯಾರಾದ್ರು ಹೊಡೆದು ಬಿಟ್ರೆ ಇಲ್ಲಿಯ ಕಾಂಗ್ರೆಸಿಗರು ಆತ್ಮಹತ್ಯೆ ಮಾಡಿಕೊಳ್ಳುತ್ತಾರ ಗೊತ್ತಿಲ್ಲ ಎಂದರು. ಶಾಸಕ ವೇದವ್ಯಾಸ್ ಕಾಮತ್ ವಿರುದ್ದ 2 , ಹರೀಶ್ ಪೂಂಜಾ ವಿರುದ್ಧ 2 ಕೇಸ್ ಹಾಲಾಗಿದೆ. ಇನ್ನು ಬಿಜೆಪಿ ನಾಯಕರು, ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ಹಾಕದ್ರೆ ಅವರು ಒಬ್ಬರೆ ಪೊಲೀಸ್ ಸ್ಟೇಷನ್ ಗೆ ಬರಲ್ಲ ನಾವು ಸಾವಿರಾರು ಕಾರ್ಯಕರ್ತರೊಂದಿಗೆ ಬರುತ್ತೇವೆ , ಆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ನೀವೆ ಹೊಣೆಯಾಗುತ್ತೀರಿ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸಭೆ ಬಳಿಕ ಕಾರ್ಯಕರ್ತರೊಂದಿಗೆ ಕಾವೂರು ಪೊಲೀಸ್ ಠಾಣೆಗೆ ಬಿಜೆಪಿ ನಾಯಕರು ತೆರಳಿದರು, ಈ ವೇಳೆ ಪೊಲೀಸರು ಬಿಜೆಪಿ ಮಖಂಡರ ಮನವೊಲಿಸಿ, ಕೆಲವು ಮುಖಂಡರು ಮಾತ್ರ ಸ್ಟೇಷನ್ ಒಳಗೆ ತೆರಳಿದರು. ವೊಲೀಸ್ ಠಾಣೆ ಹೊರಗೆಡೆ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ನಿಲ್ಲಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.