LATEST NEWS
ಭಾರತ್ ಸ್ಕೂಲ್ ನಲ್ಲಿ ಹಿಜಬ್ ಧರಿಸಿದ ವಿಧ್ಯಾರ್ಥಿನಿಯರಿಗೆ ತರಗತಿ ಪ್ರವೇಶಕ್ಕೆ ನಿರಾಕರಣೆ
ಉಳ್ಳಾಲ ಫೆಬ್ರವರಿ 24 : ದಕ್ಷಿಣಕನ್ನಡ ಜಿಲ್ಲೆಯಲ್ಲೂ ಇದೀಗ ಹಿಜಬ್ ವಿವಾದ ಹೆಚ್ಚಾಗುವ ಸಾಧ್ಯತೆಗಳು ಕಾಣ ಸಿಕ್ಕಿದ್ದು, ಇದೀಗ ಕೋಮು ಸೂಕ್ಷ್ಮ ಪ್ರದೇಶ ಉಳ್ಳಾಲಕ್ಕೂ ಹಬ್ಬಿದೆ. ಶಿಕ್ಷಣ ಇಲಾಖೆಯಿಂದ ಅಧಿಕೃತ ಆದೇಶ ಬಂದ ಹಿನ್ನಲೆ ಉಳ್ಳಾಲದ ಭಾರತ್ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿನಿಯರಿಗೆ ಹಿಜಬ್ ಧರಿಸಿ ತರಗತಿ ಪ್ರವೇಶಕ್ಕೆ ನಿರಾಕರಿಸಲಾಗಿದೆ.
ಗುರುವಾರ ವಿದ್ಯಾರ್ಥಿನಿಯರು ಎಂದಿನಂತೆ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಿದ್ದರು. ಈ ವೇಳೆ ಶಿಕ್ಷಕಿ ತರಗತಿಗೆ ಹಾಜರಾದ ಸಂದರ್ಭದಲ್ಲಿ ಹಿಜಾಬ್ ಧರಿಸಬಾರದು ಎಂದು ಸರ್ಕಾರ ದ ಆದೇಶ ಇದೆ. ಈ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ ಈ ಕಾರಣದಿಂದ ಹಿಜಾಬ್ ಧರಿಸದೆ ಬರುವಂತೆ ಸೂಚಿಸಿದರು ಎನ್ನಲಾಗಿದೆ.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿದ್ಯಾರ್ಥಿನಿಯರು ಈ ವಿಚಾರ ನಮ್ಮಲ್ಲಿ ಹೇಳುವುದು ಅಲ್ಲ, ಪೋಷಕರಲ್ಲಿ ಹೇಳಬೇಕು ಎಂದಿದ್ದಾರೆ.
ಈ ವೇಳೆ ಹಾಜರಾದ ಆಡಳಿತ ಮಂಡಳಿ ಹಿಜಾಬ್ ಧರಿಸಿ ತರಗತಿಗೆ ಬರಲು ಅವಕಾಶ ಇಲ್ಲ ಎಂದು ಹೇಳಿದ್ದು ಇದರಿಂದ ಕೆರಳಿದ ಕೆಲವು ವಿದ್ಯಾರ್ಥಿನಿ ಯರು ತರಗತಿಯಿಂದ ಹೊರ ಬಂದು ನ್ಯಾಯ ಕ್ಕಾಗಿ ಹೋರಾಟ ನಡೆಸಿದರು.