LATEST NEWS
ಅಂಬೇಡ್ಕರ್ ಗೆ ಅವಮಾನ ಬಿಇಓ ವಿರುದ್ಧ ಕೇಸು ದಾಖಲು : ಅಮಾನತ್ತಿಗೆ ಸುಂದರ ಮಾಸ್ತರ್ ಆಗ್ರಹ
ಬ್ರಹ್ಮಾವರ , ಎಪ್ರಿಲ್ 26: ಬ್ರಹ್ಮಾವರ ಶಿಕ್ಷಣಾಧಿಕಾರಿ ಓ ಆರ್ ಪ್ರಕಾಶ್ ವಿರುಧ್ಧ ದಲಿತ ಧೌರ್ಜನ್ಯ ತಡೆ ಕಾಯಿದೆ ಅನ್ವಯ ಬ್ರಹ್ಮಾವರ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಈ ಕೂಡಲೇ ಶಿಕ್ಷಣಾಧಿಕಾರಿ ಓ ಆರ್ ಪ್ರಕಾಶ್ ರವರನ್ನು ಅಮಾನತು ಮಾಡಬೇಕೆಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಬ್ರಹ್ಮಾವರ ಶಿಕ್ಷಣಾಧಿಕಾರಿ ಓ ಆರ್ ಪ್ರಕಾಶ್ ರವರು ಸಮಾಜಿಕ ಜಾಲತಾಣಗಳಲ್ಲಿ ” ಫ್ರೌಡ್ ಟು ಬಿ ಎ ಬ್ರಾಹ್ಮಿಣ್ ” ಎಂಬ ತಲೆ ಬರಹದಡಿಯಲ್ಲಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ರವರಿಗೆ ಅವಮಾನಿಸುವ ಉದ್ದೇಶದಿಂದ ಮತ್ತು ಬ್ರಾಹ್ಮಣ್ಯವನ್ನು ಅತ್ಯುನ್ನತ ಎಂದು ತೊರ್ಪಡಿಸುವ ಉದ್ದೇಶ ದಿಂದ , ಸಂವಿಧಾನವನ್ನು ಬ್ರಾಹ್ಮಣ ಸಮೂದಾಯಕ್ಕೆ ಸೇರಿದವರು ಬರೆದರು, ಸಂವಿಧಾನ ಕರುಡು ಸಮಿತಿಯ ಅಧ್ಯಕ್ಷರು ಕೂಡ ಬ್ರಾಹ್ಮಣ ಸಮೂದಾಯಕ್ಕೆ ಸೇರಿದವರೇ ಆಗಿದ್ದರು.ಎಂದು ಹಲವಾರು ಪುಟಗಳಷ್ಟು ಉದ್ದದ ಲೇಖನವನ್ನು ಬ್ರಹ್ಮಾವರ ವಲಯದ ಕನ್ನಡ ಶಿಕ್ಷಕರ ಗ್ರೂಪಲ್ಲಿ ಹರಡಿದ್ದರು.ಈ ಮೆಸೇಜ್ ತುಂಬಾ ವೈರಲ್ ಆಗಿ ವಿವಾದ ಸ್ರಷ್ಟಿಸಿತ್ತು.
ಈ ಲೇಖನದ ವಿರುಧ್ಧ ದಲಿತ ಸಂಘಣೆಗಳು ವಿರೋಧ ವ್ಯಕ್ತ ಪಡಿಸಿದ್ದವು. ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಂಚಾಲಕರಾದ ಸುಂದರ ಮಾಸ್ತರ್ ರವರು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಧೌರ್ಜನ್ಯ ತಡೆ ಕಾಯ್ದೆಯನ್ವಯ ಕೇಸು ದಾಖಲಿಸಿ ಒಬ್ಬ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುವ ಜವಾಬ್ದಾರಿಯುತ ಸ್ಥಾನದಲ್ಲಿರುವ ಸರಕಾರಿ ನೌಕರ ಉದ್ದೇಶ ಪೂರ್ವಕವಾಗಿ ಬ್ರಾಹ್ಮಣ ಸಮೂದಾಯವನ್ನು ಎತ್ತಿ ಹಿಡಿಯುವ ಮತ್ತು ಪರಿಶಿಷ್ಟ ಜಾತಿಯಲ್ಲಿ ಜನಿಸಿದ ಬಾಬಾಸಾಹೇಬ್ ಅಂಬೇಡ್ಕರ್ ರವರನ್ನು ತುಚ್ಛೀಕರಿಸುವ ಏಕೈಕ ಉದ್ದೇಶದಿಂದ ಈ ಲೇಖನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು ಖಂಡನೀಯ.
ಈ ಕೂಡಲೇ ಸಂಭಂದ ಪಟ್ಟ ಅಧಿಕಾರಿಗಳು ಓ ಆರ್ ಪ್ರಕಾಶ್ ರವರನ್ನು ಅಮಾನತು ಮಾಡಬೇಕು. ಅಮಾನತು ಮಾಡದೇ ಹೋದರೆ ದಲಿತ ಸಂಘರ್ಷ ಸಮಿತಿ ತನ್ನ ಹೋರಾಟವನ್ನು ಆರಂಭಿಸುವುದು ಅನಿವಾರ್ಯ ವಾಗುತ್ತದೆ ಎಂದು ಎಚ್ಚರಿಸಿದ್ದಾರೆ.