KARNATAKA
ವಾಲ್ಮೀಕಿ ಹಗರಣ ತನಿಖೆಗೆ ಬಿಗ್ ಟ್ವಿಸ್ಟ್, ಕೇಂದ್ರದ ವಿರುದ್ದ ತೊಡೆ ತಟ್ಟಿದ ಸಿಎಂ ಸಿದ್ದರಾಮಯ್ಯ,ED ಅಧಿಕಾರಗಳ ಮೇಲೆ FIR ದಾಖಲು
ಬೆಂಗಳೂರು : ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಸಿಐಟಿ ತನಿಖೆ ನಡೆಯುವಾಗಲೇ ಕೇಂದ್ರ ಸರ್ಕಾರ ಅಧೀನದ ಜಾರಿ ನಿರ್ದೇಶನಾಲಯ ಅಖಾಡಕ್ಕೆ ಇಳಿದು ರಾಜ್ಯ ಸರ್ಕಾರಕ್ಕೆ ಶಾಕ್ ನೀಡಿತ್ತು. ಮಾಜಿ ಸಚಿವ ನಾಗೇಂದ್ರರನ್ನ ಬಂಧಿಸಿ ಜೈಲಿಗಟ್ಟಿ ಕೈ ನಾಯಕರಿಗೆ ಕಾಡಿದ್ದ ಇಡಿ ಅಧಿಕಾರಿಗಳಿಗೆ ಸಂಕಷ್ಟ ಎದುರಾಗಿದ್ದು ಅಧಿಕಾರಿಗಳ ವಿರುದ್ದ ಪೊಲೀಸ್ FIR ದಾಖಲಾಗಿದೆ.
ಸರ್ಕಾರದ ವಿರುದ್ಧವೇ ED ಷಡ್ಯಂತ್ರ ಮಾಡಿರೋ ಆರೋಪ ಕೇಳಿಬಂದಿದೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂಪಾಯಿ ಅಕ್ರಮ ನಡೆದೋಗಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ನಿಗಮದ ಅಧಿಕಾರಿಗಳೇ ಹಣವನ್ನ ಹರಿದು ಹಂಚಿಕೊಂಡಿದ್ದಾರೆ. ಹೀಗೆ ಭ್ರಷ್ಟಾಚಾರದಲ್ಲಿ ಮುಳುಗಿದ್ದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ. ಆದ್ರೀಗ ಸರ್ಕಾರಿ ಅಧಿಕಾರಿಯೊಬ್ಬರು ಇಡಿಗೆ ಶಾಕ್ ಕೊಟ್ಟಿದ್ದಾರೆ. ವಾಲ್ಮೀಕಿ ನಿಗಮದ ಅಕ್ರಮದ ಬಗ್ಗೆ ಇ.ಡಿ ತನಿಖೆ ನಡೆಸ್ತಿದೆ. ಮಾಜಿ ಸಚಿವ ನಾಗೇಂದ್ರ, ಶಾಸಕ ಬಸನಗೌಡ ದದ್ದಲ್‌ಗೂ ವಿಚಾರಣೆ ಮಾಡಿದೆ. ಆದ್ರೀಗ ಅಕ್ರಮ ಹಣ ವರ್ಗಾವಣೆ ತನಿಖೆ ಹೊಸ ತಿರುವು ಪಡೆದಿದೆ. ಅಕ್ರಮ ಹಣ ವರ್ಗಾವಣೆ ತನಿಖೆ ನಡೆಸ್ತಿರೋ ಇಡಿ ವಿರುದ್ಧವೇ ಗಂಭೀರ ಆರೋಪ ಕೇಳಿ ಬಂದಿದೆ. ವಿಚಾರಣೆಗೆ ಕರೆಸಿ ನಾಗೇಂದ್ರ ಹಾಗೂ ಸಿಎಂ ವಿರುದ್ಧ ಹೇಳಿಕೆ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಅಪರ ನಿರ್ದೇಶಕ ಕಲ್ಲೇಶ್‌ಗೆ ಒತ್ತಡ ಹೇರಿರುವ ಆರೋಪ ಕೇಳಿ ಬಂದಿದೆ. ಇದೇ ವಿಚಾರವಾಗಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಡಿ ವಿಚಾರಣಾಧಿಕಾರಿಗಳಾದ ಮಿತ್ತಲ್ ಹಾಗು ಕಣ್ಣನ್ ಮೇಲೆ ಎಫ್‌ಐಆರ್ ದಾಖಲಾಗಿ E D ಅಧಿಕಾರಿಗಳಿಗೆ ನೋಟೀಸ್ ಜಾರಿಯಾಗಿದೆ.
ಎಫ್‌ಐಆರ್‌ನಲ್ಲಿ ಏನಿದೆ?
ವಾಲ್ಮೀಕಿ ನಿಗಮದ ಅಕ್ರಮ ಸಂಬಂಧ ಜು. 16ರಂದು ನಾನು ಇಡಿ ವಿಚಾರಣೆಗೆ ಹೋಗಿದ್ದೆ. ಈ ವೇಳೆ ಇಡಿ ವಿಚಾರಣಾಧಿಕಾರಿಗಳಾದ ಮರುಳಿ ಕಣ್ಣನ್ ಹಾಗೂ ಮಿತ್ತಲ್ ನನ್ನನ್ನು ಪ್ರಶ್ನಿಸಿದರು. ಖಜಾನೆಯ ಮೂಲಕ ನಿಗಮದ ಎಂಜಿ ರಸ್ತೆ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ನಾಗೇಂದ್ರ, ಆರ್ಥಿಕ ಇಲಾಖೆ ಸೂಚನೆಯಿತ್ತು ಎಂದು ಬರೆದುಕೊಡುವಂತೆ ನನ್ನ ಮೇಲೆ ಒತ್ತಡ ಹೇರಿದ್ದರು. ಮತ್ತೆ ಜುಲೈ 18ರಂದು ವಿಚಾರಣೆಗೆ ಹೋದಾಗ ಮತ್ತೆ ಒತ್ತಡ ಹೇರಿದ್ರು. ಬರೆದುಕೊಟ್ಟರೆ ಬಚಾವ್ ಮಾಡುತ್ತೇವೆ. ಇಲ್ಲದಿದ್ರೆ ಬಂಧಿಸುತ್ತೇವೆ. 2 ವರ್ಷ ಜಾಮೀನು ಸಿಗಲ್ಲ. 7 ವರ್ಷ ಶಿಕ್ಷೆ ಕೊಡಿಸುವ ತನಕ ಬಿಡಲ್ಲ ಎಂದು ಬೆದರಿಕೆ ಒಡ್ಡಿದ್ದರು.ಇಡಿ ಸರ್ಕಾರವನ್ನ ಟಾರ್ಗೆಟ್ ಮಾಡ್ತಿದೆ ಅಂತ ಕೆಂಡಕಾರುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಇದು ಅಸ್ತ್ರ ಸಿಕ್ಕಂತಾಗಿದೆ.