DAKSHINA KANNADA
ಮಂಗಳೂರಿನಲ್ಲಿ ಬಂಗಾಳಿಗಳ ದುರ್ಗಾಪೂಜೆ
ಮಂಗಳೂರಿನಲ್ಲಿ ಬಂಗಾಳಿಗಳ ದುರ್ಗಾಪೂಜೆ
ಮಂಗಳೂರು ಸೆಪ್ಟೆಂಬರ್ 29: ಕರಾವಳಿಯಲ್ಲಿ ನೆಲೆಸಿರುವ ಬಂಗಾಲಿಗಳು ನವರಾತ್ರಿ ಹಬ್ಬವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸುತ್ತಾರೆ. ಕರ್ನಾಟಕದ ವಿವಿಧೆಡೆ ನೆಲೆಸಿರುವ ಬಂಗಾಲಿಗಳು ಪ್ರತೀ ವರ್ಷ ಮಂಗಳೂರಿಗೆ ಬಂದು ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ದುರ್ಗೆಯನ್ನು ಪ್ರತಿಷ್ಟಾಪಿಸಿ ಆರಾಧಿಸುತ್ತಾರೆ.
ಬಂಗಾಲದ ದುರ್ಗೆ ಉಗ್ರ ಸ್ವರೂಪಿ. ಈ ವಿಗ್ರಹವನ್ನು ತಯಾರಿಸುವವರು ಬಂಗಾಲದಿಂದಲೇ ಬರುತ್ತಾರೆ. ವಿಗ್ರಹಗಳು ಇಲ್ಲಿಯೇ ರೂಪುಗೊಳ್ಳುತ್ತವೆ. ಆರಾಧನೆ, ಪೂಜಾ ವಿಧಿಗಳನ್ನು ನಡೆಸುವ ಅರ್ಚಕರೂ ಇದಕ್ಕಾಗಿ ಪಶ್ಚಿಮ ಬಂಗಾಲದಿಂದ ಬಂದು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಬಂಗಾಲಿ ಕಲ್ಪನೆಯಲ್ಲಿ ದುರ್ಗಾದೇವಿ ಹಿಮಾಲಯದಿಂದ ಬರುತ್ತಾರೆ ಎಂಬ ನಂಬಿಕೆ ಇದೆ.
ಕಳೆದ 34 ವರ್ಷಗಳಿಂದ ಮಂಗಳೂರಿನಲ್ಲಿ ದುರ್ಗಾ ಪೂಜೆಯನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಇಲ್ಲಿಯ ದಸರಾಕ್ಕೂ ಬಂಗಾಲಿಗಳ ನವರಾತ್ರಿಗೂ ವ್ಯತ್ಯಾಸವಿದೆ, ಕರ್ನಾಟಕದಲ್ಲಿ 9 ದಿನ ನವರಾತ್ರಿ ಬಳಿಕ 10 ನೇ ದಿನದಂದು ದಸರಾ ಆಚರಣೆಯಲ್ಲಿದೆ, ಆದರೆ ಬೆಂಗಾಲಿಗಳು 5 ದಿನ ಮಾತ್ರ ಹಬ್ಬವನ್ನು ಆಚರಿಸುತ್ತಾರೆ.