ದುರ್ಗಾಪುರ ಅಕ್ಟೋಬರ್ 12: ವೈದ್ಯಕೀಯ ವಿಧ್ಯಾರ್ಥಿನಿಯ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಒಡಿಶಾದ ಜಲೇಶ್ವರ ನಿವಾಸಿ ಮತ್ತು ದುರ್ಗಾಪುರದ ಶಿವಪುರ ಪ್ರದೇಶದ ಐಕ್ಯೂ ಸಿಟಿ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿರುವ 23 ವರ್ಷದ ವಿದ್ಯಾರ್ಥಿನಿ ಶುಕ್ರವಾರ ರಾತ್ರಿ ಪುರುಷ ಸ್ನೇಹಿತನೊಂದಿಗೆ ಹೊರಗೆ ಹೋಗಿದ್ದಾಗ, ಕೆಲವು ದುಷ್ಕರ್ಮಿಗಳು ಕಾಲೇಜು ಗೇಟ್ ಬಳಿ ಅವರನ್ನು ಅಡ್ಡಗಟ್ಟಿ ಕಾಲೇಜು ಆವರಣದಿಂದ ಸುಮಾರು 1 ಕಿಲೋಮೀಟರ್ ದೂರದಲ್ಲಿರುವ ನಿರ್ಜನ ಪ್ರದೇಶಕ್ಕೆ ಮಹಿಳೆಯನ್ನು ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ.
ಇದೀಗ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳು ಸ್ಥಳೀಯರು ಎಂದು ಅಧಿಕಾರಿಗಳು ತಿಳಿಸಿದ್ದು, ಆದಾಗ್ಯೂ, ಅವರ ಗುರುತುಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.