BELTHANGADI
ಬೆಳ್ತಂಗಡಿ: ಚಾಲಕನ ನಿರ್ಲಕ್ಷ್ಯದ ವೇಗಕ್ಕೆ ಕಾರು ಬಡಿದು ಮಹಿಳೆ ಗಂಭೀರ..!

ಬೆಳ್ತಂಗಡಿ : ವೇಗವಾಗಿ ಬಂದ ಚಾಲಕನ ನಿಯಂತ್ರಣ ತಪ್ಪಿದ ಕಾರು,ರಸ್ತೆ ಬದಿ ನಿಂತಿದ್ದ ಮಹಿಳೆ ಡಿಕ್ಕಿ ಹೊಡೆದು, ಮಹಿಳೆ ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಅಯ್ಯಪ್ಪ ನಗರ ಬಳಿ ಸಂಭವಿಸಿದೆ.
ಕಾರು ಡಿಕ್ಕಿಯ ರಭಸಕ್ಕೆ ಮಹಿಳೆ ಒಂದಷ್ಟು ದೂರ ನೆಗೆದು ಬಿದ್ದು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳು ಮಹಿಳೆ ಸ್ಥಳೀಯ ಅಂಜಲಿ ಶೆಣೈ ಎಂದು ಗುರುತ್ತಿಸಲಾಗಿದ್ದು ಅಪಘಾತದ ಬಳಿಕಕಾರು ಚಾಲಕ ಕಾರು ಸಮೇತ ಪರಿಯಾಗಿದ್ದ ಬಳಿಕ ಬೆಳ್ತಂಗಡಿ ಠಾಣೆಗೆ ಬಂದು ಶರಣಾಗಿದ್ದಾನೆ.ರಸ್ತೆಬದಿಯಲ್ಲಿದ್ದ ಮಾರುತಿ ಒಮಿನಿಗೂ ಕಾರು ಗುದ್ದಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
