BELTHANGADI
ಬೆಳ್ತಂಗಡಿ : ಗ್ರಾಮ ಪಂಚಾಯತ್ ಉಪ ಚುನಾವಣೆ, SDPI ನಿಂದ ಪೂರ್ವತಯಾರಿ ಸಭೆ

ಬೆಳ್ತಂಗಡಿ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ SDPI ಬೆಳ್ತಂಗಡಿ ( belthangady) ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಮುಂಬರುವ ಗ್ರಾಮ ಪಂಚಾಯತ್ ಉಪ ಚುನಾವಣೆ ಪೂರ್ವತಯಾರಿ ಸಭೆಯು ಕ್ಷೇತ್ರಧ್ಯಕ್ಷರಾದ ಅಕ್ಬರ್ ಬೆಳ್ತಂಗಡಿ ನೇತೃತ್ವದಲ್ಲಿ ಭಾನುವಾರ ಪಕ್ಷದ ಕಚೇರಿಯಲ್ಲಿ ನಡೆಯಿತು.
SDPI ಜಿಲ್ಲಾ ಚುನಾವಣೆ ಉಸ್ತುವಾರಿಯಾದ ಬಂಟ್ವಾಳ ಪುರಸಭೆ ಉಪಾಧ್ಯಕ್ಷರಾದ ಮೂನಿಷ್ ಆಲಿ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ನವಾಝ್ ಕಟ್ಟೆ ಆಗಮಿಸಿದ್ದರು.
ಉಜಿರೆ ಹಾಗೂ ಕುವೆಟ್ಟು ಗ್ರಾಮ ಪಂಚಾಯಿತಿಗೆ ನಡೆಯುವ ಉಪಚುನಾವಣೆಯಲ್ಲಿ ಕುವೆಟ್ಟು ಎಸ್‌ಡಿಪಿಐ ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಅಂತಿಮವಾಗಿದ್ದು, ಉಜಿರೆ ಪಂಚಾಯತ್ ಗೆ ಅಭ್ಯರ್ಥಿ ಇನ್ನೆರಡು ದಿನಗಳಲ್ಲಿ ಅಂತಿಮಗೊಳ್ಳಲಿದ್ದು, ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು ಎಂದು ಮೂನಿಷ್ ಆಲಿ ತಿಳಿಸಿದರು.
ಈ ಸಂದರ್ಭದಲ್ಲಿ SDPI ಕ್ಷೇತ್ರ ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ, ಉಜಿರೆ ಹಾಗೂ ವೇಣೂರು ಬ್ಲಾಕ್ ನಾಯಕರು, ಪಂಚಾಯತ್ ಸದಸ್ಯರು ಪೂರ್ವತಯಾರಿ ಸಭೆಯಲ್ಲಿ ಪಾಲ್ಗೊಂಡಿದ್ದರು
