BELTHANGADI
ಬೆಳ್ತಂಗಡಿ : ಮಕ್ಕಳನ್ನು ಶಾಲೆಗೆ ಕೊಂಡೊಯ್ಯುವಾಗ ಕಾಡಾನೆ ದಾಳಿ, ಬೈಕ್ ಪುಡಿಪುಡಿ,ಅಪ್ಪ ಮಕ್ಕಳು ಪಾರು..!
ಮಕ್ಕಳನ್ನು ಶಾಲೆಗೆ ಕೊಂಡೊಯ್ಯುವಾಗ ಕಾಡಾನೆಯೊಂದು ದಾಳಿ (elephant attack)ಮಾಡಿದ್ದು ಅಪ್ಪ ಮಕ್ಕಳು ಆನೆ ದಾಳಿಯಿಂದ ಪಾರಾದ್ರೆ ಬೈಕ್ ಮಾತ್ರ ಪುಡಿ ಪುಡಿಯಾಗಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿಯ ಶಿಬಾಜೆ ಬಳಿ ಗುರುವಾ ಬೆಳಿಗ್ಗೆ ಈ ಘಟನೆ ಸಂಭವಿಸಿದೆ.
ಬೆಳ್ತಂಗಡಿ: ಮಕ್ಕಳನ್ನು ಶಾಲೆಗೆ ಕೊಂಡೊಯ್ಯುವಾಗ ಕಾಡಾನೆಯೊಂದು ದಾಳಿ ಮಾಡಿದ್ದು ಅಪ್ಪ ಮಕ್ಕಳು ಆನೆ ದಾಳಿಯಿಂದ ಪಾರಾದ್ರೆ ಬೈಕ್ ಮಾತ್ರ ಪುಡಿ ಪುಡಿಯಾಗಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿಯ ಶಿಬಾಜೆ ಬಳಿ ಗುರುವಾ ಬೆಳಿಗ್ಗೆ ಈ ಘಟನೆ ಸಂಭವಿಸಿದೆ.
ಕಳ್ಳಾಜೆ ನಿವಾಸಿ ವಸಂತ ಗೌಡರವರು ತನ್ನ ಮಕ್ಕಳನ್ನು ಶಿಬಾಜೆ ಗ್ರಾಮದ ಪೆರ್ಲ ಶಾಲೆಗೆ ಮಕ್ಕಳನ್ನು ಇಂದು ಮುಂಜಾನೆ 8.30ರ ಸುಮಾರಿಗೆ ಬಿಡಲು ಹೋಗುತ್ತಿದ್ದಾಗ ಮಾರ್ಗ ತಿರುವಿನ ಮಧ್ಯೆ ಒಂಟಿ ಸಲಗವೊಂದು ಪ್ರತ್ಯಕ್ಷಗೊಂಡಿದೆ. ಭಯದಿಂದ ತನ್ನ ಬೈಕ್ ಅನ್ನು ಸಡನ್ನಾಗಿ ಬ್ರೇಕ್ ಹಾಕಿ ನಿಲ್ಲಿಸಿದಾಗ ಬೈಕಿಂದ ಬಿದ್ದಿದ್ದಾರೆ. ಬಿದ್ದ ಪರಿಣಾಮ ಕೈ ಮೊಣಕಾಲುಗಳಿಗೆ ಗಾಯಗಳಾಗಿದ್ದರೂ ಪ್ರಾಣ ಭಯದಿಂದ ಓಡಿ ತಪ್ಪಿಸಿಕೊಂಡಿದ್ದಾರೆ. ಈ ಸಂದರ್ಭ ಬೈಕ್ ಕಡೆಗೆ ಆಗಮಿಸಿದ ಒಂಟಿ ಸಲಗ ಬೈಕ್ ಅನ್ನು ಸೊಂಡಿಲಿನಿಂದ ಕೆಡವಿ ಕಾಲಿನಿಂದ ತುಳಿದು ಪುಡಿ ಪುಡಿ ಮಾಡಿ ತನ್ನ ಪೌರುಷವನ್ನು ತೋರಿಸಿದೆ.
ಆನೆಯಿಂದ ತಪ್ಪಿ ಓಡುತ್ತಿದ್ದ ವಸಂತ ಗೌಡ ಮತ್ತು ಮಕ್ಕಳಾದ ಲಾವ್ಯ, ಅದ್ವಿತ್ ಗೆ ಮೊಣಕಾಲು ಮತ್ತು ಕೈ ಗಳಿಗೆ ಗಾಯಗಳಾಗಿದ್ದು ಅಲ್ಲಿಂದ ಓಡಿ ಮನೆ ಸೇರಿದ್ದಾರೆ.ಅರಣ್ಯ ಇಲಾಖೆಯವರು ಕೂಡಲೇ ಆಗಮಿಸಿ ಆನೆಯನ್ನು ಓಡಿಸಬೇಕು ಇಲ್ಲದಿದ್ದಲ್ಲಿ ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.