BELTHANGADI
ಬೆಳ್ತಂಗಡಿ – ಫಲ್ಗುಣಿ ನದಿಗೆ ಬಿದ್ದು ಸಾವನಪ್ಪಿದ ವಿಧ್ಯಾರ್ಥಿ

ಬೆಳ್ತಂಗಡಿ ಫೆಬ್ರವರಿ 24: ಆಕಸ್ಮಿಕವಾಗಿ ಬಾಲಕನೋಬ್ಬ ಫಲ್ಗುಣಿ ನದಿಗೆ ಬಿದ್ದು ಸಾವನಪ್ಪಿದ ಘಟನೆ ಆರಂಬೋಡಿ ಗ್ರಾಮದಲ್ಲಿ ರವಿವಾರ ಸಂಜೆ ನಡೆದಿದೆ.
ಮೃತರನ್ನು ಉಪ್ಪಿನಂಗಡಿಯ ರಾಮಕುಂಜ ಸಮೀಪದ ಆತೂರು ನಿವಾಸಿ ಪವನ್ (16) ಎಂದು ಗುರುತಿಸಲಾಗಿದೆ. ಈತ ಆರಂಬೋಡಿ ಗ್ರಾಮದಲ್ಲಿರುವ ಸೂರಂಟೆ ಎಂಬಲ್ಲಿ ಅಜ್ಜಿಯ ಮನೆಯಲ್ಲಿದ್ದು ಸಿದ್ಧಕಟ್ಟೆ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
