DAKSHINA KANNADA
ಬೆಳ್ಳಾರೆ : ಮನೆ ವಿದ್ಯುತ್ ಕಡಿತಗೊಳಿಸಿ ಮುಸುಕುಧಾರಿ ತಂಡದಿಂದ ಹಲ್ಲೆ ಜೀವಬೆದರಿಕೆ..!

ಮಧ್ಯರಾತ್ರೀಲಿ ಮನೆಗೆ ನುಗ್ಗಿದ ಮುಸುಕುಧಾರಿಗಳ ತಂಡ ವಿದ್ಯುತ್ ಮೈನ್ ಸ್ವಿಚ್ ಆಫ್ ಮಾಡಿ ಮನೆಯೊಳಗಿದ್ದ ವ್ಯಕ್ತಿಯೊಬ್ಬರನ್ನು ಹೊರಗೆ ಕರೆದು ಬೆದರಿಸಿ ಹಲ್ಲೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಯಲ್ಲಿ ನಡೆದಿದೆ.
ಬೆಳ್ಳಾರೆ: ಮಧ್ಯರಾತ್ರೀಲಿ ಮನೆಗೆ ನುಗ್ಗಿದ ಮುಸುಕುಧಾರಿಗಳ ತಂಡ ವಿದ್ಯುತ್ ಮೈನ್ ಸ್ವಿಚ್ ಆಫ್ ಮಾಡಿ ಮನೆಯೊಳಗಿದ್ದ ವ್ಯಕ್ತಿಯೊಬ್ಬರನ್ನು ಹೊರಗೆ ಕರೆದು ಬೆದರಿಸಿ ಹಲ್ಲೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಯಲ್ಲಿ ನಡೆದಿದೆ.

ಘಟನೆ ಸಂಬಂಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕೊಳ್ತಿಗೆ ಗ್ರಾಮದ ಚಿತ್ರಪ್ರಭ ಶೆಟ್ಟಿ ಎಂಬವರು ಠಾಣೆಗೆ ದೂರು ನೀಡಿದ್ದಾರೆ.
ಸೆಪ್ಟೆಂಬರ್ 1 ರಂದು ಈ ಘಟನೆ ನಡೆದಿದೆ. ನಡುರಾತ್ರಿ ಚಿತ್ರಪ್ರಭ ಶೆಟ್ಟಿ ವಾಸ್ತವ್ಯದ ಮನೆ ಬಳಿ ಮಂಕಿ ಕ್ಯಾಪ್ ಹಾಗೂ ಕುತ್ತಿಗೆಗೆ ಶಾಲು ಹಾಕಿದ ನಾಲ್ಕರಿಂದ ಐದು ಮಂದಿ ಅಪರಿಚಿತ ವ್ಯಕ್ತಿಗಳು ಬಂದು ಮನೆಯ ವಿದ್ಯುತ್ ಸಂಪರ್ಕದ ಮೈನ್ ಸ್ವಿಚ್ ಆಫ್ ಮಾಡಿ ತನ್ನ ಗಂಡನನ್ನು ಮನೆಯ ಒಳಗಿನಿಂದ ಹೊರಗೆ ಕರೆದು ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಇಲ್ಲಿಯೇ ಕೊಚ್ಚಿಹಾಕುವುದಾಗಿ ಬೆದರಿಸಿರುವುದಾಗಿ ಆರೋಪಿಸಲಾಗಿದೆ.
ತನ್ನಲ್ಲಿ ಈಗಾಗಲೇ ಪೊಲೀಸ್ ಠಾಣೆಯಲ್ಲಿ ನೀಡಿದ ದೂರನ್ನು ಹಿಂಪಡೆಯಬೇಕು, ಇಲ್ಲದಿದ್ದಲ್ಲಿ ನಿಮ್ಮ ಇಡೀ ಕುಟುಂಬವನ್ನು ನಾಶಮಾಡುವುದಾಗಿ ಗದರಿಸಿ ಮನೆ ಬಾಗಿಲಿಗೆ ದೊಣ್ಣೆ, ಕಲ್ಲು, ಬಿಯರ್ ಬಾಟಲ್ ನಿಂದ ಬಡಿದು ಬೆದರಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ವೇಳೆ 112 ಸಹಾಯವಾಣಿಗೆ ಕರೆ ಮಾಡಿದ್ದು, ಈ ವಿಚಾರ ತಿಳಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಜಮೀನು ತಕರಾರಿಗೆ ಸಂಬಂಧಿಸಿ ತನಗೆ ಬೈದು ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.
ಬೆಳ್ಳಾರೆ ಠಾಣೆಯಲ್ಲಿ ಜಮೀನು ತಕರಾರು ಕುರಿತು ಮಹಿಳೆಯೊಬ್ಬರ ಮೇಲೆ ದೂರು ಅರ್ಜಿ ನೀಡಿರುವ ಧ್ವೇಷದಿಂದ ಆರೋಪಿಗಳು ಈ ಕೃತ್ಯ ಎಸಗಿರುವುದಾಗಿದೆ ಎಂದು ಶಂಕಿಸಲಾಗಿದೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆ 59/2023 ಕಲಂ : 447, 504, 506 ಜೊತೆಗೆ 149 ಐಪಿಸಿ. ಯಂತೆ ಪ್ರಕರಣ ದಾಖಲಾಗಿದೆ.