LATEST NEWS
ಬಿಜೈ ಅಪಾರ್ಟ್ಮೆಂಟ್ ನಲ್ಲಿ ದಂಪತಿ ಶವ ಪತ್ತೆ

ಮಂಗಳೂರು ಜನವರಿ 28: ದಂಪತಿಗಳ ಶವ ಮಂಗಳೂರಿನ ಬಿಜೈನ ಅಪಾರ್ಟ್ ಮೆಂಟ್ ಒಂದರಲ್ಲಿ ಪತ್ತೆಯಾಗಿದೆ.
ಮೃತರನ್ನು ಬಿಜೈ ನಿವಾಸಿಗಳಾದ ದಿನೇಶ್ (65) ಹಾಗೂ ಶೈಲಜಾ (64) ಎಂದು ಗುರುತಿಸಲಾಗಿದೆ. ಶೈಲಜಾ ಅನಾರೋಗ್ಯ ಹಿನ್ನೆಲೆಯಲ್ಲಿ ಹಾಸಿಗೆ ಹಿಡಿದಿದ್ದು, ಇವರನ್ನು ನೋಡಿಕೊಳ್ಳಲು ರಾತ್ರಿ ಮತ್ತು ಬೆಳಿಗ್ಗೆ ಸಂದರ್ಭ ಹೋಮ್ ನರ್ಸ್ ಬಂದು ಹೋಗುತ್ತಿದ್ದರು. ರಾತ್ರಿ ಕೆಲಸದ ಹೋಂ ನರ್ಸ್ ಬೆಳಿಗ್ಗೆ ಮನೆಯಿಂದ ಹೊರಟ ನಂತರ ಹಗಲು ಕೆಲಸ ನಿರ್ವಹಿಸುವ ಹೋಂ ನರ್ಸ್ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ದಿನೇಶ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಂಡತಿ ಮೃತಪಟ್ಟಿರುವ ಪಕ್ಕದ ಕೋಣೆಯಲ್ಲೇ ಗಂಡ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ದಂಪತಿಗಳು ಮಾತ್ರ ವಾಸ ಮಾಡುತ್ತಿದ್ದು, ಮಕ್ಕಳು ಹೊರ ದೇಶದಲ್ಲಿ ಉದ್ಯೋಗದಲ್ಲಿದ್ದಾರೆ ಎನ್ನಲಾಗಿದೆ.
ಉರ್ವ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ಧಾರೆ.