LATEST NEWS
ಪೊಲೀಸ್ ಠಾಣೆ ಬಳಿ ನಿಂತಿದ್ದ ಬಸ್ಸಲ್ಲಿ ಯುವತಿ ಮೇಲೆ ಅತ್ಯಾಚಾರ

ಪುಣೆ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಬಸ್‌ನೊಳಗೆ 26 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಲಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ.
ಪುಣೆಯ ಜನನಿಬಿಡ ಪ್ರದೇಶ ಸ್ವಾಗೇಟ್ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆಯಲ್ಲದೇ, ಬಸ್ ಪೊಲೀಸ್ ಠಾಣೆಯ 100 ಮೀ.ವ್ಯಾಪ್ತಿಯಲ್ಲೇ ನಿಂತಿತ್ತು ಎನ್ನಲಾಗಿದೆ.

ಆರೋಪಿಯ ಪತ್ತೆಗಾಗಿ ಹಲವು ತಂಡಗಳ ರಚನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ ಬೇರೆಡೆ ನಿಂತಿದೆ ಎಂದು ಸುಳ್ಳು ಹೇಳಿ, ಬೇರೆಡೆ ನಿಂತಿದ್ದ ಬಸ್ ಒಂದರೊಳಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ.